
ATM ನಲ್ಲಿ ಕಳ್ಳರ ಕೈಚಳಕ…ವೃದ್ದರೊಬ್ಬರ ಗಮನ ಬೇರೆಡೆ ಸೆಳೆದು ಕಾರ್ಡ್ ಕದ್ದ ಖದೀಮರು…52,000 ಡ್ರಾ ಮಾಡಿ ಎಸ್ಕೇಪ್…ಹೈದರಾಬಾದ್ ನಲ್ಲಿ ಸಿಕ್ಕಿಬಿದ್ದ ಐನಾತಿಗಳು…
- TV10 Kannada Exclusive
- January 12, 2025
- No Comment
- 244
ಮೈಸೂರು,ಜ12,Tv10 ಕನ್ನಡ
ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಬಂದ ವೃದ್ದರೊಬ್ಬರ ಗಮನ ಬೇರೆಡೆ ಸೆಳೆದು ಕಾರ್ಡ್ ಲಪಟಾಯಿಸಿ ನಂತರ 52 ಸಾವಿರ ಡ್ರಾ ಮಾಡಿ ಎಸ್ಕೇಪ್ ಆಗಿದ್ದ ವಂಚಕರನ್ನ ಹೈದರಾಬಾದ್ ನಲ್ಲಿ ಪತ್ತೆ ಮಾಡಲಾಗಿದೆ.ಈ ಸಂಭಂಧ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲ್ಯಾಣಗಿರಿ ನಿವಾಸಿ ನೂರ್ ಅಹಮದ್ (75) ಎಂಬುವರು ಹಣ ಡ್ರಾ ಮಾಡಲು ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಎಟಿಎಂ ಗೆ ಹೋಗಿದ್ದಾರೆ.8 ಸಾವಿರ ಹಣ ಡ್ರಾ ಮಾಡುವ ವೇಳೆ ವ್ಯಕ್ತಿಯೊಬ್ಬ ಬುಜಕ್ಕೆ ತಗುಲಿಸಿ ತಳ್ಳಿದ್ದಾನೆ.ಇತ್ತ ತಿರುಗಿ ನೋಡುವಷ್ಟರಲ್ಲಿ ಹತ್ತಿರದಲ್ಲೇ ಇದ್ದ ಇಬ್ಬರು ಖದೀಮರು ಎಟಿಎಂ ಮೆಷಿನ್ ನಲ್ಲಿ ಹಾಕಿದ್ದ ಕಾರ್ಡ್ ನ್ನ ಬದಲಾಯಿಸಿ ನಕಲಿ ಕಾರ್ಡ್ ಇಟ್ಟಿದ್ದಾರೆ.ನೂರ್ ಅಹಮದ್ ರವರು ನಕಲಿ ಕಾರ್ಡ್ ತೆಗೆದುಕೊಂಡು ತೆರಳಿದ್ದು ನಂತರ ಅನುಮಾನಗೊಂಡು ಬ್ಯಾಂಕ್ ಗೆ ಭೇಟಿ ನೀಡಿ ಪರಿಶೀಲಿಸಿದಾಗ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.ಮೆಷಿನ್ ನಿಂದ ಕಾರ್ಡ್ ತೆಗೆಯುವಷ್ಟರಲ್ಲಿ ವಂಚಕರು ನಕಲಿ ಕಾರ್ಡ್ ಇಟ್ಟು ಒರಿಜಿನಲ್ ಲಪಟಾಯಿಸಿದ್ದಾರೆ.ವೃದ್ದರು ಕಾರ್ಡ್ ಬಳಸುವಾಗ ಪಾಸ್ ವರ್ಡ್ ನೋಡಿದ್ದ ವಂಚಕರು ನಂತರ 52,400/- ರೂ ಡ್ರಾ ಮಾಡಿಕೊಂಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಉದಯಗಿರಿ ಠಾಣೆ ಪೊಲೀಸರು ಸಿಸಿ ಕ್ಯಾಮರಾ ಫುಟೇಜ್ ಪರಿಶೀಲಿಸಿ ವಂಚಕರ ಜಾಡನ್ನ ಪತ್ತೆ ಮಾಡಿದ್ದಾರೆ.ನಕಲಿ ಕಾರ್ಡ್ ಇಟ್ಟು ವಂಚನೆ ಮಾಡಿದ ಖದೀಮರನ್ನ ಪತ್ತೆ ಮಾಡುವಲ್ಲಿ ಉದಯಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ…