
ಸಾಲಭಾಧೆ:ಡೆತ್ ನೋಟ್ ಬರೆದು ವ್ಯಕ್ತಿ ನಾಪತ್ತೆ…ಕುಟುಂಬಸ್ಥರಲ್ಲಿ ಆತಂಕ…
- TV10 Kannada Exclusive
- January 13, 2025
- No Comment
- 134
ಮೈಸೂರು,ಜ13,Tv10 ಕನ್ನಡ
ಸಾಲ ತೀರಿಸಲು ಸಾದ್ಯವಾಗದೆ ಮನೆ ಬಿಟ್ಟು ಹೋಗುತ್ತಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದು ವ್ಯಕ್ತಿ ನಾಪತ್ತೆ ಆಗಿರುವ ಘಟನೆ ಮೈಸೂರಿನ ಶಾರದಾದೇವಿ ನಗರದಲ್ಲಿ ನಡೆದಿದೆ.ಪತಿಯನ್ನ ಹುಡುಕಿ ಕೊಡುವಂತೆ ಪತ್ನಿ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದಾರೆ.
ರಾಜೇಶ್ ಡೆತ್ ನೋಟ್ ಬರೆದು ನಾಪತ್ತೆಯಾದವರು.ಕಂಗಾಲಾದ ಪತ್ನಿ ಚೈತ್ರ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ.ಬ್ಯೂಟಿ ಪಾರ್ಲರ್ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಚೈತ್ರ ಪತಿ ರಾಜೇಶ್ ಎರಡು ವರ್ಷಗಳ ಹಿಂದೆ ಸಣ್ಣಪುಟ್ಟ ಸಾಲ ಮಾಡಿಕೊಂಡಿದ್ದು ಮನೆ ಬಿಟ್ಟು ಓಡಿಹೋಗಿದ್ದರು.ಸಾಕಷ್ಟು ಹುಡುಕಾಡಿದ ನಂತರ ರಾಜೇಶ್ ಪತ್ತೆಯಾಗಿದ್ದರು.ಸಾಲದ ಬಗ್ಗೆ ಯೋಚನೆ ಮಾಡದಂತೆ ಪತ್ನಿ ಚೈತ್ರ ಧೈರ್ಯ ತುಂಬಿದ್ದರು.ಆದರೆ ಮತ್ತೆ ರಾಜೇಶ್ ಮನೆ ಬಿಟ್ಟು ಹೋಗಿದ್ದಾರೆ. ಸಾಲತೀರಿಸಲಾಗದೆ ಮನೆಬಿಟ್ಟು ಹೋಗುತ್ತಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದು ಜನವರಿ 10 ರಂದು ನಾಪತ್ತೆಯಾಗಿದ್ದಾರೆ.ಪತ್ನಿ ಚೈತ್ರ ಹಾಗೂ ಕುಟುಂಬ ಕಂಗಾಲಾಗಿದ್ದಾರೆ…