
ಪ್ರವಾಸಿ ತಾಣಗಳಲ್ಲಿ ದುಪ್ಪಟ್ಟು ಪಾರ್ಕಿಂಗ್ ಶುಲ್ಕ ವಸೂಲಿ ಆರೋಪ…ಕಣ್ಮುಚ್ಚಿ ಕುಳಿತ ತಾಲೂಕು ಆಡಳಿತ…ಪ್ರವಾಸಿಗರು ಗರಂ…
- TV10 Kannada Exclusive
- January 14, 2025
- No Comment
- 125

ಶ್ರೀರಂಗಪಟ್ಟಣ,ಜ14,Tv10 ಕನ್ನಡ
ಶ್ರೀರಂಗಪಟ್ಟಣ ಗೋಸಾಯಿಘಾಟ್ ಹಾಗೂ ಸಂಗಮದಲ್ಲಿ ದುಪ್ಪಟ್ಟು ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದಾರೆಂದು ಪ್ರವಾಸಿಗರು ಆರೋಪಿಸಿದ್ದಾರೆ.ಗುತ್ತಿಗೆದಾರರು ಶ್ರೀರಂಗಪಟ್ಟಣ ಗೋಸಾಯಿ ಘಾಟ್ ಹಾಗೂ ಟೌನ್ ಮುನಿಸಿಪಲ್ ಕೌನ್ಸಿಲ್ ಎಂದು ನಕಲಿ ಬಿಲ್ ಸೃಷ್ಟಿಸಿ ರಾಜಾರೋಷವಾಗಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದಾಗಿ ಆರೋಪ ಬಂದಿದೆ.ಈ ಬಗ್ಗೆ ಪ್ರವಾಸಿಗರು ಹಲವಾರು ಬಾರಿ ಮೌಖಿಕವಾಗಿ ಪುರಸಭೆ ಹಾಗೂ ಮುಜರಾಯಿ ಇಲಾಖೆಗೆ ಮಾಹಿತಿ ನೀಡಿದ್ದರೂ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಂಡಿಲ್ಲ.ಟೆಂಡರ್ ದಾರರು ನಿಗದಿತ ಶುಲ್ಕಗಳ ನಾಮಫಲಕಗಳನ್ನ ಅಳವಡಿಸದೆ ಪ್ರವಾಸಿಗರನ್ನ ದಾರಿ ತಪ್ಪಿಸುತ್ತಿದ್ದಾರೆ.ನಿಯಮಗಳನ್ನ ಮೀರಿ ಶುಲ್ಕ ವಸೂಲಿ ಮಾಡಿದ್ರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರೂ ಕ್ಯಾರೆ ಎನ್ನದ ಟೆಂಡರ್ ದಾರ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದಾನೆ.ಕೆಲವು ನೋಟೀಸ್ ಗಳನ್ನ ನೀಡಿದ್ದರೂ ಟೆಂಡರ್ ದಾರ ತನ್ನ ವರ್ತನೆ ಬದಲಾಯಿಸಿಲ್ಲವೆಂದು ಹೇಳಲಾಗಿದೆ.ಲಿಖಿತ ದೂರೊಂದು ಬಂದ್ರೆ ಮಾತ್ರ ಕ್ರಮ ಕೈಗೊಳ್ಳುವುದಾಗಿ ಪುರಸಭೆ ಮುಖ್ಯಾಧಿಕಾರಿ ರಾಜಣ್ಣ ಹೇಳುತ್ತಿದ್ದಾರೆ.ದುಪ್ಪಟ್ಟು ಶುಲ್ಕ ವಸೂಲಿ ಮಾಡುವುದಕ್ಕೆ ಬ್ರೇಕ್ ಹಾಕಲು ಲಿಖಿತ ದೂರಿಗಾಗಿ ಕಾಯುತ್ತಿರುವುದು ವಿಪರ್ಯಾಸ…