
ಹುಲ್ಲಹಳ್ಳಿ ಗ್ರಾ.ಪಂ.ಅವ್ಯವಹಾರಗಳ ಸಮಗ್ರ ತೆನಿಖೆಗೆ ಆದೇಶ…ವಿಶೇಷ ತಂಡ ರಚನೆ…ಒಂದು ವರದಲ್ಲಿ ವರದಿ ಸಲ್ಲಿಸುವಂತೆ ಸೂಚನೆ…
- TV10 Kannada Exclusive
- January 13, 2025
- No Comment
- 107
ನಂಜನಗೂಡು,ಜ13,Tv10 ಕನ್ನಡ
ಹುಲ್ಲಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿರುವ ಭ್ರಷ್ಟಾಚಾರ,ಅವ್ಯವಹಾರಗಳ ಬಗ್ಗೆ ಸಮಗ್ರ ತೆನಿಖೆ ನಡೆಸುವಂತೆ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ.ಇದಕ್ಕಾಗಿ ವಿಶೇಷ ತಂಡ ರಚಿಸಿ ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.ನಂಜನಗೂಡು ತಾಲೂಕು ಪಂಚಾಯ್ತಿಯ ಸಹಾಯಕ ಲೆಕ್ಕಾಧಿಕಾರಿ ಶ್ರೀಕಂಠನಾಯ್ಕ,ದ್ವಿತೀಯ ದರ್ಜೆ ಸಹಾಯಕ ಲೆಕ್ಕಾಧಿಕಾರಿ ಶ್ರೀನಿವಾಸ ಮೂರ್ತಿ ರವರನ್ನೊಳಗೊಂಡ ತಂಡ ರಚಿಸಲಾಗಿದೆ.
ಹುಲ್ಲಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ವಿರುದ್ದ ಹಣಕಾಸು ದುರುಪಯೋಗ,ನಿರ್ವಹಣೆಯಲ್ಲಿ ಲೋಪದೋಷಗಳ ಬಗ್ಗೆ ದೂರುಗಳು ಬಂದ ಹಿನ್ನಲೆ ತೆನಿಖೆ ನಡೆಸುವಂತೆ ನಂಜನಗೂಡು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್ ಆದೇಶ ಹೊರಡಿಸಿದ್ದಾರೆ.
ಗ್ರಾಮಪಂಚಾಯ್ತಿಗೆ ಸೇರಿದ ಆಸ್ತಿಗಳನ್ನ ವಶಕ್ಕೆ ಪಡೆಯದೆ ನಾಮಫಲಕಗಳನ್ನ ಅಳವಡಿಸದೆ ಇರುವುದು,ಮಳಿಗೆಗಳ ಹರಾಜು ಪ್ರಕ್ರಿಯೆ ವಿಳಂಬ ಮಾಡಿರುವುದು,ಶುದ್ದ ಕುಡಿಯುವ ನೀರಿನ ಘಟಕಗಳ ಶುದ್ದೀಕರಣ ಹಾಗೂ ವಿದ್ಯುತ್ ದೀಪಗಳ ವಿಚಾರದಲ್ಲಿ 4 ಲಕ್ಷ ಹಣ ದುರ್ಬಳಕೆ ಮಾಡಿರುವುದು,ಸಂಗಮ ರಸ್ತೆ ಹಾಗೂ ರಾಜ್ಯ ಹೆದ್ದಾರಿಗಳನ್ನ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರೂ ತೆರುವುಗೊಳಿಸಲು ಕ್ರಮ ಕೈಗೊಳ್ಳದಿರುವುದು,ಉದ್ಯೋಗ ಖಾತರಿ ಯೋಜನೆಯಡಿ ಸ್ಥಳೀಯರಿಗೆ ಆಧ್ಯತೆ ನೀಡದೆ ಅನಗತ್ಯವಾಗಿ ಹಣ ಖರ್ಚು ಮಾಡುತ್ತಿರುವುದು,ಸಾಮಾನ್ಯ ಸಭೆ ನಡೆಸದೆ 15 ನೇ ಹಣಕಾಸು ಯೋಜನೆ ಹಣ ದುರ್ಬಳಕೆ ಮಾಡಿರುವುದು,ಮುಖ್ಯ ರಸ್ತೆಗಳಲ್ಲಿ ಒಕ್ಕಣೆ ಮಾಡುತ್ತಿದ್ದರೂ ಕ್ರಮ ವಹಿಸದಿರುವುದು ಸೇರಿದಂತೆ ಇನ್ನಿತರ ಆರೋಪಗಳನ್ನ ಮಾಡಿರುವ ಹಿನ್ನಲೆ ಸಮಗ್ರ ತೆನಿಖೆ ನಡೆಸಿ ವರದಿ ಸಲ್ಲಿಸುವಂತೆ ಖಡಕ್ ಆದೇಶ ಹೊರಡಿಸಿದ್ದಾರೆ…

