
ರಕ್ಷಣೆ ನೀಡಬೇಕಾದ ಪೊಲೀಸರಿಂದ ನಿಂದನೆ ಆರೋಪ…ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ…
- TV10 Kannada Exclusive
- January 18, 2025
- No Comment
- 21
ಸರಗೂರು,ಜ18,Tv10 ಕನ್ನಡ
ಗಂಡ ಹಾಗೂ ಮನೆಯವರು ನೀಡುತ್ತಿರುವ ಕಿರುಕುಳದ ಬಗ್ಗೆ ದೂರು ನೀಡಲು ಠಾಣೆಗೆ ತೆರಳಿದ ಮಹಿಳೆ ಹಾಗೂ ಸಹೋದರನಿಗೆ ಪೊಲೀಸರು ನಿಂದಿಸಿದ್ದಾರೆಂಬ ಆರೋಪ ಕೇಳಿಬಂದಿದೆ.ಪೊಲೀಸರ ವರ್ತನೆ ಹಾಗೂ ಗಂಡನ ಮನೆಯವರ ಕಿರುಕುಳದಿಂದ ಮನನೊಂದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಸರಗೂರು ತಾಲೂಕು ಮುಳ್ಳೂರು ಗ್ರಾಮದಲ್ಲಿ ಘಟನೆ ನಡೆದಿದೆ.ವಿಷ ಸೇವಿಸಿದ ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮುಳ್ಳೂರು ಗ್ರಾಮದ ಮಹಾಲಕ್ಷ್ಮಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿ.ಸರಗೂರು ಪೊಲೀಸ್ ಠಾಣೆಯ ಪೇದೆ ಚಂದ್ರು ಹಾಗೂ ಸಬ್ ಇನ್ಸ್ಪೆಕ್ಟರ್ ನಂದೀಶ್ ನಿಂದಿಸಿದ್ದಾರೆಂದು ಮಹಾಲಕ್ಷ್ಮಿ ಆರೋಪಿಸಿದ್ದಾರೆ.
ಹುರಾ ಗ್ರಾಮದ ಮಹಾಲಕ್ಷ್ಮಿ 2014 ರಲ್ಲಿ ಮುಳ್ಳೂರು ಗ್ರಾಮದ ಮಂಜು ಎಂಬುವರನ್ನ ವರಿಸಿದ್ದರು.ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಮದುವೆ ವೇಳೆ 160 ಗ್ರಾಂ ಚಿನ್ನ,4 ಲಕ್ಷ ಕ್ಯಾಶ್,ಒಂದು ಬೈಕ್ ವರದಕ್ಷಿಣೆಯಾಗಿ ನೀಡಿದ್ದಾರೆ.ನಂತರ ಮನೆ ಕಟ್ಟಲು 6 ಲಕ್ಷ ಕ್ಯಾಶ್ ಕೊಟ್ಟಿದ್ದಾರೆ.ಮಹಾಲಕ್ಷ್ಮಿ ರವರ ತಂದೆಯಿಂದ ವರದಕ್ಷಿಣೆಯಾಗಿ ಪಡೆದ ಹಣದಿಂದ ಪತಿಯ ಅಣ್ಣ ಮಹೇಶ್ ಹೆಸರಲ್ಲಿ ಮನೆ ನಿರ್ಮಿಸಿದ್ದಾರೆ.ಈ ಅನ್ಯಾಯವನ್ನ ಪ್ರಶ್ನಿಸಿದಾಗ ಪತಿ ಮಂಜು ಸಹ ಪತ್ನಿಯ ವಿರುದ್ದ ತಿರುಗಿಬಿದ್ದಿದ್ದಾನೆ.ಗಂಡ ಹಾಗೂ ಮನೆಯವರು ಮಾಡಿದ ವಂಚನೆ ಬಗ್ಗೆ ನ್ಯಾಯ ಕೇಳಲು ಮಹಾಲಕ್ಷ್ಮಿ ಪ್ರಯತ್ನ ಮಾಡಿದಾಗ ಹಲ್ಲೆ ನಡೆಸಿದ್ದಾರೆ.ಗ್ರಾಮದ ಮುಖಂಡರ ಸಮ್ಮುಖದಲ್ಲಿ ನಡೆದ ಪಂಚಾಯ್ತಿಯಲ್ಲೂ ನ್ಯಾಯ ಸಿಕ್ಕಿಲ್ಲ.ಬೇಸತ್ತ ಮಹಾಲಕ್ಷ್ಮಿ ತನ್ನ ಸಹೋದರ ಮಧುಕುಮಾರ್ ಜೊತೆ ಸರಗೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಹೋದಾಗ ಅಲ್ಲಿನ ಸಿಬ್ಬಂದಿ ಚಂದ್ರು ಹಾಗೂ ಎಸ್ಸೈ ನಂದೀಶ್ ರವರು ನಿಂದಿಸಿದ್ದಾರೆಂದು ಆರೋಪಿಸಿದ್ದಾರೆ.ಪೊಲೀಸರ ವರ್ತನೆ ಹಾಗೂ ಗಂಡನ ಮನೆಯವರ ಕಿರುಕುಳಕ್ಕೆ ಮಾನಸಿಕವಾಗಿ ನೊಂದ ಮಹಾಲಕ್ಷ್ಮಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಸಧ್ಯ ಮಹಾಲಕ್ಷ್ಮಿ ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಮಹಾಲಕ್ಷ್ಮಿ ಚಿಕಿತ್ಸೆ ಪಡೆಯುತ್ತಿದ್ದಾರೆ…