ಎಟಿಎಂ ಗೆ ಹಣ ಹಾಕದೆ ಲಪಟಾಯಿಸಿದ ನೌಕರ…5.80 ಲಕ್ಷ ವಂಚನೆ…ಇಬ್ಬರ ವಿರುದ್ದ FIR ದಾಖಲು…

ಎಟಿಎಂ ಗೆ ಹಣ ಹಾಕದೆ ಲಪಟಾಯಿಸಿದ ನೌಕರ…5.80 ಲಕ್ಷ ವಂಚನೆ…ಇಬ್ಬರ ವಿರುದ್ದ FIR ದಾಖಲು…

ಹುಣಸೂರು,ಜ18,Tv10 ಕನ್ನಡ

ಹಣ ಎಟಿಎಂಗೆ ತುಂಬದೆ‌ ತೆಗೆದುಕೊಂಡ ಹೋದ ಆರೋಪ ಹಿನ್ನಲೆ ಇಬ್ಬರ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಣ ತುಂಬದೆ ತೆಗೆದುಕೊಂಡು ಹೋದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಹಿನ್ನಲೆ ಪ್ರಕರಣ ದಾಖಲಾಗಿದೆ.
ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ಎಂಬುವವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.
ಎಟಿಎಂಗೆ ಹಣ‌ ತುಂಬವ ಏಜೆನ್ಸಿ‌ ಪಡೆದಿದ್ದ ಟಿ ಎಲ್ ಎಂಟರ್‌ಪ್ರೈಸಸ್ ನಲ್ಲಿ ಕೆಲಸ ಮಾಡುತ್ತಿದ್ದ ಅಕ್ಷಯ್ ಮೈಸೂರು ಜಿಲ್ಲೆಯ ಒಟ್ಟು 16 ಎಟಿಎಂಗಳಿಗೆ
ಕಂಪನಿ ಪರವಾಗಿ ಹೋಗಿ ಹಣ ತುಂಬುವ ಕೆಲಸ ಮಾಡುತ್ತಿದ್ದ.
ಕಂಪನಿ ಆಡಿಟ್ ಮಾಡಿದಾಗ ಹಣದಲ್ಲಿ ವ್ಯತ್ಯಾಸ ಬಂದಿದೆ.
ಕ್ಯಾಶ್ ಲೋಡಿಂಗ್ ಎಟಿಎಂ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ
ಎಟಿಎಂ ನಲ್ಲಿ ಹಣ ಹಾಕದೆ ಬ್ಯಾಗ್‌ನಲ್ಲಿ ತುಂಬಿಕೊಂಡು
ಹೋದ ದೃಶ್ಯ ಸೆರೆಯಾಗಿದೆ.
ಗದ್ದಿಗೆ ಗ್ರಾಮದ ಎಟಿಎಂ ನಲ್ಲಿ 5 ಲಕ್ಷದ 80 ಸಾವಿರ ಹಣ ಲೋಡ್ ಮಾಡಿಲ್ಲ.ಈ ಕೃತ್ಯಕ್ಕೆ ಆಕೆಯ ಪರಿಚಯದ ತೇಜಸ್ವಿನಿ‌ ಎಂಬಾಕೆಯ ಕುಮ್ಮಕ್ಕು ಆರೋಪ
ಇಬ್ಬರು ಈ ಹಣದಿಂದ ಚಿನ್ನ ಖರೀದಿಸಿರುವ ಬಗ್ಗೆ ಮಾಹಿತಿ ಬಂದಿದೆ.
ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಹಿನ್ನೆಲೆ ಇಬ್ಬರ ವಿರುದ್ದ ಎಫ್ ಐ ಆರ್ ದಾಖಲಾಗಿದೆ…

Spread the love

Related post

ಪ್ರೊ.ಭಾಷ್ಯಂ ಸ್ವಾಮೀಜಿ ಹಾಗೂ ಕೆ.ಬಿ.ಲಿಂಗರಾಜು ರವರಿಗೆ ಮೈಸೂರು ಪತ್ರಿಕಾ ಛಾಯಾಗ್ರಹಕರ ಸಂಘದಿಂದ ಅಭಿನಂದನೆ…

ಪ್ರೊ.ಭಾಷ್ಯಂ ಸ್ವಾಮೀಜಿ ಹಾಗೂ ಕೆ.ಬಿ.ಲಿಂಗರಾಜು ರವರಿಗೆ ಮೈಸೂರು ಪತ್ರಿಕಾ ಛಾಯಾಗ್ರಹಕರ ಸಂಘದಿಂದ…

ಮೈಸೂರು,ಫೆ4,Tv10 ಕನ್ನಡ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಶ್ರೀ ಯೋಗ ನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ಪ್ರೊಫೆಸರ್ ಶ್ರೀ ಭಾಷ್ಯಂ ಸ್ವಾಮೀಜಿ ಹಾಗೂ ಸಮಾಜಸೇವಕರು ಮೈಸೂರು…
ಕರ್ತವ್ಯ ನಿರ್ವಹಣೆ ವೇಳೆ ಸೆಸ್ಕ್ ಸಿಬ್ಬಂದಿ ಸಾವು ಪ್ರಕರಣ…ಮೃತರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ…

ಕರ್ತವ್ಯ ನಿರ್ವಹಣೆ ವೇಳೆ ಸೆಸ್ಕ್ ಸಿಬ್ಬಂದಿ ಸಾವು ಪ್ರಕರಣ…ಮೃತರ ಕುಟುಂಬಕ್ಕೆ ಪರಿಹಾರ…

ಕರ್ತವ್ಯ ನಿರ್ವಹಣೆ ವೇಳೆ ಸೆಸ್ಕ್ ಸಿಬ್ಬಂದಿ ಸಾವು ಪ್ರಕರಣ…ಮೃತರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ… ಮೈಸೂರು,ಫೆ3,Tv10 ಕನ್ನಡ ಇತ್ತೀಚೆಗೆ ಹನೂರು ಉಪ ವಿಭಾಗ ವ್ಯಾಪ್ತಿಯ ಚಾವಿಸನಿನಿ (ಸೆಸ್ಕ್‌) ಸಿಬ್ಬಂದಿ…
ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಫೆಸ್ಟ್‌ನಲ್ಲಿ ಮೈಸೂರಿನ ನಯನ ಕುಕ್ಕೂರು, ಅನುಶ್ರೀಗೆ ಭರ್ಜರಿ ಸಾಧನೆ

ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಫೆಸ್ಟ್‌ನಲ್ಲಿ ಮೈಸೂರಿನ ನಯನ ಕುಕ್ಕೂರು, ಅನುಶ್ರೀಗೆ…

ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಫೆಸ್ಟ್‌ನಲ್ಲಿ ಮೈಸೂರಿನ ನಯನ ಕುಕ್ಕೂರು, ಅನುಶ್ರೀಗೆ ಭರ್ಜರಿ ಸಾಧನೆ ಮೈಸೂರು:ಮೈಸೂರಿನಲ್ಲಿ 01/02/2026 ರಂದು ನಡೆದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಫೆಸ್ಟ್‌ನಲ್ಲಿ ಮೈಸೂರಿನ…

Leave a Reply

Your email address will not be published. Required fields are marked *