ಕಾಂಗ್ರೆಸ್ ಮುಖಂಡರನ್ನ ಗ್ರಾಮಕ್ಕೆ ನಿಷೇಧಿಸಲಾಗಿದೆ…ನಗರ್ಲೆ ಗ್ರಾಮದಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್ ಗಳು…
- TV10 Kannada Exclusive
- January 20, 2025
- No Comment
- 307
ನಂಜನಗೂಡು,ಜ20,Tv10 ಕನ್ನಡ
ನಗರ್ಲೆ ಗ್ರಾಮದ ಕಾಂಗ್ರೆಸ್ ಮುಖಂಡರು ಕೈಲಾಗದವರು(ನಾಮರ್ಧರು) ಆದ ಕಾರಣ ಯಾವುದೇ ಕಾಂಗ್ರೆಸ್ ಮುಖಂಡರನ್ನ ಗ್ರಾಮಕ್ಕೆ ನಿಷೇಧಿಸಲಾಗಿದೆ…ವರುಣಾ ವಿಧಾನಸಭಾ ಕ್ಷೇತ್ರ…
ಇಂತಹ ಸಂದೇಶವಿರುವ ಫ್ಲೆಕ್ಸ್ ಗಳು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸಿದ ವರುಣಾ ವಿಧಾನಸಭಾ ಕ್ಷೇತ್ರದ ನಗರ್ಲೆ ಗ್ರಾಮದಲ್ಲಿ ರಾರಾಜಿಸುತ್ತಿವೆ.ಸಾಕಷ್ಟು ಸ್ಥಳಗಳಲ್ಲಿ ಇಂತಹ ಭಿತ್ತಿ ಫಲಕಗಳನ್ನ ಅಳವಡಿಸಲಾಗಿದೆ.ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲೇ ಇಂತಹ ಸಂದೇಶ ಕಾಂಗ್ರೆಸ್ ಗೆ ಮುಜುಗರ ತಂದಿದೆ.ನಗರ್ಲೆ ಗ್ರಾಮದ ಅಭಿವೃದ್ದಿ ಬಗ್ಗೆ ಬೇಸತ್ತಿರುವ ಗ್ರಾಮಸ್ಥರು ಇಂತಹ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.ಯಾವುದೇ ಕಾಂಗ್ರೆಸ್ ಮುಖಂಡರು ಗ್ರಾಮಕ್ಕೆ ನಿಷೇಧಿಸಿದೆ ಎಂಬ ಸಂದೇಶ ಚರ್ಚೆಗೆ ಗ್ರಾಸವಾಗಿದೆ.ಕೇವಲ ಸ್ಥಳೀಯ ಮುಖಂಡರು ಮಾತ್ರವಲ್ಲದೆ ಯಾವುದೇ ಮುಖಂಡರು ಎಂಬ ಪದ ಬಳಕೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಮುಖ್ಯಮಂತ್ರಿಗಳ ತವರಿನಲ್ಲೇ ಇಂತಹ ಸಂದೇಶ ರವಾನೆ ಆದ್ರೆ ಮುಂದಿನ ಬೆಳವಣಿಗೆ ಹೇಗೆ ಎಂಬ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ…