ಗಾಂಜಾ ಸೇವನೆ ಮಾಡ್ತೀಯ ಎಂದು ಬೆದರಿಸಿ 10 ಸಾವಿರ ಕಿತ್ತ ಖದೀಮರು…ನಾಲ್ವರ ವಿರುದ್ದ FIR ದಾಖಲು…
- TV10 Kannada Exclusive
- January 20, 2025
- No Comment
- 101
ಮೈಸೂರು,ಜ20,Tv10 ಕನ್ನಡ
ಗಾಂಜಾ ಸೇವನೆ ಮಾಡುತ್ತಿದ್ದೀಯ ಪೊಲೀಸರನ್ನ ಕರೆಸ್ತೀನಿ,ಮನೆಯವರನ್ನ ಕರೆಸ್ತೀನಿ ಎಂದು ಬೆದರಿಕೆ ಹಾಕಿದ ನಾಲ್ವರು ಯುವಕರ ತಂಡ ಖಾಸಗಿ ಕಂಪನಿ ಉದ್ಯೋಗಿಯಿಂದ 10 ಸಾವಿರ ಪೀಕಿದ ಘಟನೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕನಗರದಲ್ಲಿ ನಡೆದಿದೆ.ಪಡುವಾರಹಳ್ಳಿ ನಿವಾಸಿಗಳಾದ ವರುಣ್,ಒಂಟೆ ಹಾಗೂ ಇನ್ನಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ.ಖಾಸಗಿ ಕಂಪನಿಯೊಂದರ ಟೆಕ್ನಿಕಲ್ ಅಡ್ವೈಸರ್ ಆಗಿರುವ ಚಿರಾಗ್ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿನಾಯಕನಗರದಲ್ಲಿ ಬಾಡಿಗೆ ಪಡೆದಿದ್ದ ಕೊಠಡಿಯಲ್ಲಿ ಒಂಟಿಯಾಗಿ ಕುಳಿತಿದ್ದ ವೇಳೆ ವರುಣ್,ಒಂಟೆ ಹಾಗೂ ಇನ್ನಿಬ್ಬರು ಅಕ್ರಮವಾಗಿ ನುಗ್ಗಿದ್ದಾರೆ.ನೀನು ಗಾಂಜಾ ಸೇವನೆ ಮಾಡ್ತಿದ್ದೀಯ ಪೊಲೀಸರನ್ನ ಕರೆಸ್ತೀನಿ,ನಿಮ್ಮ ಮನೆಯವರನ್ನ ಕರೆಸ್ತೀನಿ ಎಂದು ಬೆದರಿಕೆ ಹಾಕಿದ್ದಾರೆ.ಒಂದು ವಾರದ ಹಿಂದೆ ಕೊಲೆ ಮಾಡಿ ಬಂದಿದ್ದೀನಿ ನನಗೆ ತೊಂದರೆ ಮಾಡಿದ್ರೆ ನನ್ನನ್ನ ಕೊಲೆ ಮಾಡಲು ಬಂದಿದ್ದೀಯ ಎಂದು ಹೇಳ್ತೀನಿ ಎಂದು ಹೆದರಿಸಿದ್ದಾರೆ.ನಂತರ ಬಲವಂತವಾಗಿ ಕೊಠಡಿಯಿಂದ ಹೊರಕ್ಕೆ ಕರೆದೊಯ್ದು ಮಹಾರಾಣಿ ಕಾಲೇಜಿನ ಬಳಿ ಇರುವ ಪೆಟ್ರೋಲ್ ಬಂಕ್ ಬಳಿ ಕರೆದೊಯ್ದು ಸ್ಕ್ಯಾನ್ನಿಂಗ್ ಮೂಲಕ 10 ಸಾವಿರ ಗೂಗಲ್ ಪೇ ಡ್ರಾ ಮಾಡಿಸಿ ನಾಪತ್ತೆಯಾಗಿದ್ದಾರೆ.ಮತ್ತೊಮ್ಮೆ ಕೊಠಡಿಗೆ ಬಂದು ಇದೇ ರೀತಿ ಧಂಕಿ ಹಾಕಿದ್ದಾರೆ.ಆಗ ಚಿರಾಗ್ ರವರ ಸ್ನೇಹಿತರಾದ ಪೂಣಚ್ಚ,ಪೌಲೋಸ್ ಎಂಬುವರನ್ನ ಕರೆಸಿದಾಗ ವರುಣ್ ಹಾಗೂ ತಂಡ ಪರಾರಿಯಾಗಿದೆ.ಅಕ್ರಮವಾಗಿ ಕೊಠಡಿಗೆ ನುಗ್ಗಿ ಹಣ ಕಿತ್ತ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಚಿರಾಗ್ ಪ್ರಕರಣ ದಾಖಲಿಸಿದ್ದಾರೆ…