
ಮೇಕಪ್ ಆರ್ಟಿಸ್ಟ್ ಖಾಸಗಿ ಫೋಟೋಸ್ ವಿಡಿಯೋ ತೆಗೆದ ಛಾಯಾಗ್ರಾಹಕ…ಮಹಿಳೆ ಕೊಟ್ಟ ಸಾಲ ತೀರಿಸಲು ಸಾಧ್ಯವಾಗದೆ ಬ್ಲಾಕ್ ಮೇಲ್…
- TV10 Kannada Exclusive
- January 20, 2025
- No Comment
- 309
ಮೈಸೂರು,ಜ20,Tv10 ಕನ್ನಡ
ಆರ್ಥಿಕ ಸಂಕಷ್ಟದಲ್ಲಿದ್ದ ಸ್ನೇಹಿತನಿಗೆ ಕೊಟ್ಟಿದ್ದ ಸಾಲ ವಾಪಸ್ ಹಿಂದಿರುಗಿಸುವಂತೆ ಕೇಳಿದ ಮೇಕಪ್ ಆರ್ಟಿಸ್ಟ್ ರವರ ಖಾಸಗಿ ಫೋಟೋಸ್ ಮತ್ತು ವಿಡಿಯೋಗಳನ್ನ ಪ್ರದರ್ಶಿಸಿ ಬ್ಲಾಕ್ ಮೇಲ್ ಮಾಡಿರುವ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.ಈ ಸಂಭಂಧ ಹೆಸರಾಂತ ಫೋಟೋಗ್ರಾಫರ್ ಹಾಗೂ ಇವರ ತಾಯಿ ವಿರುದ್ದ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಸಂತ್ರಸ್ಥ ಮಹಿಳೆ ಪ್ರಕರಣ ದಾಖಲಿಸಿದ್ದಾರೆ.ಗೋಕುಲಂ ಬಡಾವಣೆಯ ಅಮರನಾಥ್ ಹಾಗೂ ಇವರ ತಾಯಿ ಸರಸ್ವತಿ ಎಂಬುವರ ವಿರುದ್ದ ಸಂತ್ರಸ್ಥೆ ಪೂನಮ್ ಸತ್ಯಜಿತ್ ಪಡ್ಕೆ FIR ದಾಖಲಿಸಿದ್ದಾರೆ.
ಯಾದವಗಿರಿಯ ನಿವಾಸಿ ಪೂನಮ್ ಸತ್ಯಜಿತ್ ಪಡ್ಕೆ ವೃತ್ತಿಯಲ್ಲಿ ಮೇಕಪ್ ಆರ್ಟಿಸ್ಟ್.ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಅಮರನಾಥ್ ಜೊತೆ ಪೂನಮ್ ರವರ ಸ್ನೇಹ ಬೆಳೆದಿದೆ.ವೃತ್ತಿಯಲ್ಲೂ ಸಹ ಒಂದಾಗಿ ಮುಂದುವರೆಸಿದ್ದಾರೆ.ಸಾಕಷ್ಟು ಸೆಲೆಬ್ರಿಟಿ ಹಾಗೂ ಮಾಡೆಲ್ ಗಳಿಗೆ ಪೂನಮ್ ಮೇಕಪ್ ಮಾಡುತ್ತಿದ್ದು ಇವರ ಫೋಟೋಗಳನ್ನ ಅಮರನಾಥ್ ಸೆರೆಹಿಡಿಯುತ್ತಿದ್ದರು.ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿ ಜಾಹಿರಾತುಗಳನ್ನೂ ಸಹ ಇಬ್ಬರೂ ಒಂದಾಗಿ ಮಾಡಿದ್ದಾರೆ.ವೃತ್ತಿಯಲ್ಲಿ ಒಂದಾದ ಜೋಡಿ ಸಮಯ ಕಳೆದಂತೆ ವೈಯುಕ್ತಿಕವಾಗಿಯೂ ಸಮಯ ಹಂಚಿಕೊಂಡಿದ್ದಾರೆ.ಈ ವೇಳೆ ಪೂನಮ್ ರವರ ಅನುಮತಿ ಇಲ್ಲದೆ ಅಮರನಾಥ್ ರವರು ಖಾಸಗಿ ಫೋಟೋಸ್ ಹಾಗೂ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ.ಅಮರನಾಥ್ ರವರ ಹೆಸರಿನಲ್ಲಿದ್ದ ಜಮೀನು ವಿವಾದ ನ್ಯಾಯಾಲಯ ಮೆಟ್ಟಿಲೇರಿತ್ತು.ಈ ಸಮಯದಲ್ಲಿ ಪೂನಮ್ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.31-10-2022 ರಂದ 31-8-2024 ರವರೆಗೆ ಪೂನಮ್ ರವರು ಹಂತಹಂತವಾಗಿ ಅಮರನಾಥ್ ರವರಿಗೆ 73.11 ಲಕ್ಷ ನೀಡಿದ್ದಾರೆ.ಅಲ್ಲದೆ ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣ ಸಹ ನೀಡಿದ್ದಾರೆ.ಕೊಟ್ಟ ಹಣವನ್ನ ಹಿಂದಿರುಗಿಸುವಂತೆ ಪೂನಮ್ ರವರು ಅಮರನಾಥ್ ಮೇಲೆ ಒತ್ತಡ ಹೇರಿದಾಗ ಖಾಸಗಿ ಫೋಟೋಸ್ ಮತ್ತು ವಿಡಿಯೋ ಮೊಬೈಲ್ ಗೆ ಕಳುಹಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದಾರೆ.ಅಮರನಾಥ್ ರವರ ವರ್ತನೆಯಿಂದ ಬೇಸತ್ತ ಪೂನಮ್ ಹಣ ಹಿಂದಿರುಗಿಸುವಂತೆ ಮನೆಗೆ ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.ಅಮರನಾಥ್ ಗೆ ತಾಯಿ ಸರಸ್ವತಿ ಸಹ ಸಾಥ್ ನೀಡಿ ಹಲ್ಲೆ ಮಾಡಿದ್ದಾರೆ.ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನ ಸಾಮಾಜಿಕ ಜಾಕತಾಣದಲ್ಲಿ ಹಾಕುವುದಾಗಿ ಬೆದರಿಸಿರುವ ಅಮರನಾಥ್ ವಿರುದ್ದ ಕ್ರಮ ಕೈಗೊಳ್ಳುವಂತೆ ಪೂನಮ್ ಸತ್ಯಜಿತ್ ಪಡ್ಕೆ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…