ನಗರದಲ್ಲಿ ಖಾಕಿ ಪಡೆ ಹೈ ಅಲರ್ಟ್…ಅಶೋಕಾ ರಸ್ತೆಯಲ್ಲಿ ಗಸ್ತು…ಜ್ಯೂಯಲರಿ ಮಳಿಗೆ,ಬ್ಯಾಂಕ್ ಭದ್ರತೆ ಬಗ್ಗೆ ಪರಿಶೀಲನೆ…ಸಲಹೆ ಸೂಚನೆ…

ನಗರದಲ್ಲಿ ಖಾಕಿ ಪಡೆ ಹೈ ಅಲರ್ಟ್…ಅಶೋಕಾ ರಸ್ತೆಯಲ್ಲಿ ಗಸ್ತು…ಜ್ಯೂಯಲರಿ ಮಳಿಗೆ,ಬ್ಯಾಂಕ್ ಭದ್ರತೆ ಬಗ್ಗೆ ಪರಿಶೀಲನೆ…ಸಲಹೆ ಸೂಚನೆ…

ಮೈಸೂರು,ಜ20,Tv10 ಕನ್ನಡ

ದರೋಡೆ ಪ್ರಕರಣಗಳು ಘಟಿಸಿದ ಬೆನ್ನ ಹಿಂದೆಯೇ ಮೈಸೂರು ನಗರ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.ಸಾಂಸ್ಕೃತಿಕ ನಗರಿಯಲ್ಲಿ ಯಾವುದೇ ಪ್ರಕರಣಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಮುಂದಾಗಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಅಶೋಕಾ ರಸ್ತೆಯಲ್ಲಿ ಪೆರೇಡ್ ಮಾಡಿದ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಅಭಯ ನೀಡಿದರು.ಚಿನ್ನಾಭರಣ ಅಂಗಡಿಗಳ ಭದ್ರತೆ ಹಾಗೂ ಸಿಸಿ ಕ್ಯಾಮರಾಗಳನ್ನ ಪರಿಶೀಲಿಸಿದರು.ಜ್ಯೂಯಲರಿ ಅಂಗಡಿ ಮಾಲೀಕರೊಂದಿಗೆ ಮಾತನಾಡಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಸಲಹೆ ಸೂಚನೆ ನೀಡಿದರು.ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಂಕ್ ಗಳು ಎಟಿಎಂ ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ವಿವಿದ ಪೊಲೀಸ್ ಠಾಣೆಗಳ ನಿರೀಕ್ಷಕರು ಸಾಥ್ ನೀಡಿದರು…

Spread the love

Related post

ಹುಲಿಮರಿ ಸೆರೆ…ತಾಯಿ ಹಾಗೂ ಇನ್ನೆರಡು ಮರಿಗಳ ಸೆರೆಗಾಗಿ ಕಾರ್ಯಾಚರಣೆ…

ಹುಲಿಮರಿ ಸೆರೆ…ತಾಯಿ ಹಾಗೂ ಇನ್ನೆರಡು ಮರಿಗಳ ಸೆರೆಗಾಗಿ ಕಾರ್ಯಾಚರಣೆ…

ಹುಣಸೂರು,ನ13,Tv10 ಕನ್ನಡ ಮೈಸೂರು ಜಿಲ್ಲೆಯ ಹುಣಸೂರು ತಾಲೂಕುಚಿಕ್ಕಾಡಿಗನಹಳ್ಳಿಯಲ್ಲಿ ಹುಲಿ ಮರಿ ಸೆರೆಯಾಗಿದೆ.ಗ್ರಾಮದಲ್ಲಿ ಆಗಾಗ ತಾಯಿ ಹುಲಿ ಮೂರು ಮರಿಗಳು ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು.ಈ ಹಿನ್ನೆಲೆ ಅರಣ್ಯ ಇಲಾಖೆ ಕೂಂಬಿಂಗ್‌…
ಸೆಂಟರಿಂಗ್ ಸೀಲಿಂಗ್ ಕುಸಿದು ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ…ಕಟ್ಟಡ ಮಾಲೀಕ ಸೇರಿದಂತೆ ನಾಲ್ವರ ವಿರುದ್ದ FIR

ಸೆಂಟರಿಂಗ್ ಸೀಲಿಂಗ್ ಕುಸಿದು ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ…ಕಟ್ಟಡ ಮಾಲೀಕ ಸೇರಿದಂತೆ…

ಮೈಸೂರು,ನ13,Tv10 ಕನ್ನಡ ಸೆಂಟರಿಂಗ್ ಸೀಲಿಂಗ್ ಕುಸಿದು ಕೂಲಿಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿ ನಡೆದಿದೆ.ಸುರಕ್ಷತಾ ಕ್ರಮ ಅನುಸರಿಸದ ಕಟ್ಟಡ ಮಾಲೀಕ ಸೇರಿದಂತೆ ನಾಲ್ವರ ವಿರುದ್ದ ನಜರಬಾದ್…
ತಿರುಪತಿ ಲಡ್ಡುಗೆನಕಲಿ ತುಪ್ಪ ಬಳಕೆ ಧೃಢ…ಕಠಿಣ ಶಿಕ್ಷೆಗೆ ಆಗ್ರಹ…

ತಿರುಪತಿ ಲಡ್ಡುಗೆನಕಲಿ ತುಪ್ಪ ಬಳಕೆ ಧೃಢ…ಕಠಿಣ ಶಿಕ್ಷೆಗೆ ಆಗ್ರಹ…

ಮೈಸೂರು,ನ11,Tv10 ಕನ್ನಡ ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ನಕಲಿ ತುಪ್ಪ ಬಳಸಿರುವುದು ಎಸ್‌ಐಟಿ ತನಿಖೆಯಲ್ಲಿ ದೃಢಪಟ್ಟಿದ್ದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಕೆಎಂಪಿ ಕೆ ಚಾರಿಟಬಲ್ ಟ್ರಸ್ಟ್…

Leave a Reply

Your email address will not be published. Required fields are marked *