
ಸೈಬರ್ ಅಪರಾಧ ಜಾಗೃತಿ ಮಾಹಿತಿ ಒಳಗೊಂಡ ಕ್ಯಾಲೆಂಡರ್ ಬಿಡುಗಡೆ…ಕೆಎಂಪಿಕೆ ಟ್ರಸ್ಟ್ ನಿಂದ ಉಪಯುಕ್ತ ಮಾಹಿತಿ…
- TV10 Kannada Exclusive
- January 21, 2025
- No Comment
- 58

ಮೈಸೂರು,ಜ21,Tv10 ಕನ್ನಡ
ಸೈಬರ್ ಅಪರಾಧಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಮಾಹಿತಿ ಒಳಗೊಂಡ ಕ್ಯಾಲೆಂಡರ್ ಇಂದು ಬಿಡುಗಡೆಗೊಳಿಸಲಾಯಿತು. ಕೆಎಂಪಿಕೆ ಟ್ರಸ್ಟ್ ಹೊರತಂದ ಉಪಯುಕ್ತ ಕ್ಯಾಲೆಂಡರ್ ನ್ನ ಕರ್ನಾಟಕ ಆಂತರಿಕ ಭದ್ರತಾ ವಿಭಾಗ (ISD), ಪೊಲೀಸ್ ಅಧೀಕ್ಷಕರು(SP) ಡಾ.ಎ ಎನ್ ಪ್ರಕಾಶ್ ಗೌಡ ಬಿಡುಗಡೆಗೊಳಿಸಿದರು.
6 ಪುಟಗಳುಳ್ಳ 2025 ನೇ ಇಸವಿಯ ಕ್ಯಾಲೆಂಡರ್ ನಲ್ಲಿ ಆಕರ್ಷಕವಾಗಿ ಹಾಗೂ ಸಾರ್ವಜನಿಕರಿಗೆ ಸುಲಭವಾಗಿ ಅರ್ಥವಾಗುವಂತೆ ಮಾಹಿತಿಯನ್ನ ಒದಗಿಸಲಾಗಿದೆ.ಅನಾಮಧೇಯ ವ್ಯಕ್ತಿಗಳಿಗೆ ಯಾವುದೇ ಖಾಸಗಿ ವಿಚಾರಗಳನ್ನ ಹಂಚಿಕೊಳ್ಳುವ ಬಗ್ಗೆ,ಅನುಮಾನಾಸ್ಪದ ಲಿಂಕ್ ಓಪನ್ ಮಾಡದಂತೆ,ಅನಾಮಧೇಯ ವ್ಯಕ್ತಿಗಳಿಗೆ ಬ್ಯಾಂಕ್ ಖಾತೆ ಮಾಹಿತಿ ನೀಡದಂತೆ,ಸರ್ಕಾರಿ ಅಧಿಕಾರಿಗಳ ಹೆಸರಲ್ಲಿ ಆನ್ ಲೈನ್ ನಲ್ಲಿ ವಂಚಿಸುತ್ತಿರುವ ಬಗ್ಗೆ ಸೇರಿದಂತೆ ಜಾಗೃತಿ ವಹಿಸುವ ಕುರಿತಂತೆ ಕ್ಯಾಲೆಂಡರ್ ನಲ್ಲಿ ಮಾಹಿತಿ ಒದಗಿಸಲಾಗಿದೆ.ವಂಚನೆಗೆ ಒಳಗಾದಾಗ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಲಾಗಿದೆ.
ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಡಾ.ಪ್ರಕಾಶ್ ಗೌಡ ರವರು ದೇಶದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ.
ಅದರಲ್ಲೂ ವಿದ್ಯಾವಂತ ಜನರೇ ಇದರಲ್ಲಿ ಹೆಚ್ಚಾಗಿ ಮೋಸ ಹೋಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹಣ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಪ್ರತಿಯೊಬ್ಬರಲ್ಲೂ ಡಿಜಿಟಲ್ ಕ್ರೈಂಗಳ ಜಾಗೃತಿ ಅಗತ್ಯವಾಗಿದೆ.
ದುಡಿಯದೆ ಅತಿ ಹೆಚ್ಚು ಹಣ ಗಳಿಸುವ, ಆಫರ್‌ನಲ್ಲಿ ಅತಿ ಹೆಚ್ಚಿನ ಲಾಭ ಪಡೆಯುವ ದುರಾಸೆಗೆ ಸಿಲುಕಿರುವ ಜನರೇ ಹೆಚ್ಚಿನ ಪ್ರಮಾಣದಲ್ಲಿ ಸೈಬರ್ ವಂಚನೆ ಜಾಲದಲ್ಲಿ ಸಿಲುಕುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪದವಿ ಹಂತದ ವಿದ್ಯಾರ್ಥಿಗಳು ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳ ಜೊತೆಯಲ್ಲಿ ಗೆಳೆತನ ಮಾಡಿ ವೈಯಕ್ತಿಕ ಹಾಗೂ ಆರ್ಥಿಕ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ತೊಂದರೆಗೆ ಸಿಲುಕುತ್ತಿದ್ದಾರೆ.
ಶಾಪಿಂಗ್ ಮಾಲ್ ಹಾಗೂ ಎಲ್ಲೆಂದರಲ್ಲಿ ಅಪರಿಚತರಿಗೆ ಫೋನ್ ನಂಬರ್, ಇಮೇಲ್ ಐಡಿ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಎಟಿಎಂ ಪಿನ್, ಇಂಟರ್‌ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ಗಳ ಬಗ್ಗೆ ಮಾಹಿತಿ ನೀಡಬಾರದೆಂದು ಸಲಹೆ ನೀಡಿದರು.
ಇದೆ ಸಂದರ್ಭದಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜಿ ರಾಘವೇಂದ್ರ, ದುರ್ಗಾ ಪ್ರಸಾದ್, ಬಾಲಾಜಿ, ಸಚಿನ್ ನಾಯಕ್, ಹಾಗೂ ಇನ್ನಿತರರು ಹಾಜರಿದ್ದರು…