ನಗರ ಪೊಲೀಸ್ ಮತ್ತಷ್ಟು ಅಲರ್ಟ್…ಬ್ಯಾಂಕ್,ಉದ್ಯಮಗಳ ಮೇಲೆ ಹದ್ದಿನ ಕಣ್ಣು…ಪೊಲೀಸ್,ಬ್ಯಾಂಕ್ ಅಧಿಕಾರಿಗಳ ಸಭೆ…
- TV10 Kannada Exclusive
- January 21, 2025
- No Comment
- 13
ಮೈಸೂರು,ಜ21,Tv10 ಕನ್ನಡ
ವಿವಿದೆಡೆ ನಡೆದ ದರೋಡೆ ಪ್ರಕರಣಗಳು ಪೊಲೀಸರ ನಿದ್ದೆ ಕೆಡಿಸಿದೆ.ಮುನ್ನೆಚ್ಚರಿಕೆಗೆ ವಿಶೇಷ ಆಧ್ಯತೆ ನೀಡಲಾಗುತ್ತಿದೆ.ಮೈಸೂರು ನಗರ ಪೊಲೀಸರಂತೂ ಜಾಗೃತರಾಗಿದ್ದಾರೆ.ಸಾಂಸ್ಕೃತಿಕ ನಗರಿಯಲ್ಲಿ ಅಹಿತಕರ ಘಟನೆಗಳು ಸಂಭವಿಸಬಾರದೆಂಬ ಉದ್ದೇಶದಿಂದ ಅಲರ್ಟ್ ಆಗುತ್ತಿದ್ದಾರೆ.ವಿಶೇಷವಾಗಿ ಉದ್ಯಮಗಳು ಹಾಗೂ ಬ್ಯಾಂಕ್ ಗಳ ಮೇಲೆ ಹದ್ದಿಕಣ್ಣಿಡಲು ಯೋಜನೆ ರೂಪಿಸುತ್ತಿದ್ದಾರೆ.ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್,ಡಿಸಿಪಿ ಮುತ್ತುರಾಜ್ ಹಾಗೂ ಜಾಹ್ನವಿ ರವರ ನೇತೃತ್ವದಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ಅಪರಾಧ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಲಹೆ ಸೂಚನೆಗಳನ್ನ ನೀಡಿದ್ದಾರೆ.ಬ್ಯಾಂಕ್ ಗಳು ಹಾಗೂ ಉದ್ದಿಮೆಗಳ ಮೇಲೆ ವಿಶೇಷ ನಿಗಾ ವಹಿಸುವಂತೆ ತಿಳಿಸಿದ್ದಾರೆ.ಇದೇ ವೇಳೆ ವಿವಿಧ ಬ್ಯಾಂಕ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಕಟ್ಟೆಚ್ಚರ ವಹಿಸುವಂತೆ ಸಲಹೆ ನೀಡಿದ್ದಾರೆ.ಭದ್ರತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.ಎಟಿಎಂ ಗಳಲ್ಲಿ ಸಿಸಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿರುವ ಬಗ್ಗೆಯೂ ಕಾಳಜಿ ವಹಿಸುವಂತೆ ತಿಳಿಸಿದ್ದಾರೆ.ಒಟ್ಟಾರೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಜಾಗೃತರಾಗಿರುವಂತೆ ಸೂಚನೆಗಳನ್ನ ನೀಡಿದ್ದಾರೆ…