ಬಸ್ ನಿಂದ ತಲೆ ಹೊರಹಾಕಿದ ಮಹಿಳೆ ಕುತ್ತಿಗೆ,ಕೈ,ಕಟ್…ಸ್ಥಳದಲ್ಲೇ ಸಾವು…
- TV10 Kannada Exclusive
- January 25, 2025
- No Comment
- 1829
ನಂಜನಗೂಡು,ಜ25,Tv10 ಕನ್ನಡ
ಚಲಿಸುತ್ತಿದ್ದ ಬಸ್ ನಿಂದ ಉಗುಳಲು ತಲೆ ಹೊರಹಾಕಿದ ಮಹಿಳೆ ಕುತ್ತಿಗೆ ಹಾಗೂ ಕೈ ಕಟ್ ಆಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಂಜನಗೂಡು ತಾಲೂಕು ತಾಲೂಕು ಸಿಂಧುವಳ್ಳಿ ಸಮೀಪ ನಡೆದಿದೆ. ಗುಂಡ್ಲುಪೇಟೆ ಆಲಹಳ್ಳಿ ಗ್ರಾಮದ ಶಿವಲಿಂಗಮ್ಮ(45) ಮೃತ ಮಹಿಳೆ.ಮೈಸೂರಿನಿಂದ ಗುಂಡ್ಲುಪೇಟೆಯತ್ತ ತೆರಳುತ್ತಿದ್ದ ಕೆಎಸ್ ಆರ್.ಟಿ ಸಿ ಬಸ್ ನಲ್ಲಿ ಶಿವಲಿಂಗಮ್ಮ ಪ್ರಯಾಣಿಸುತ್ತಿದ್ದರು.ಸಿಂಧುವಳ್ಳಿ ಸಮೀಪ ಬಸ್ ವಾಹನವೊಂದನ್ನ ಓವರ್ ಟೇಕ್ ಮಾಡುವ ಸಂಧರ್ಭದಲ್ಲಿ ಶಿವಲಿಂಗಮ್ಮ ಉಗುಳುವ ಸಲುವಾಗಿ ತಲೆಯನ್ನ ಹೊರಹಾಕಿದಾಗ ಪಕ್ಕದಲ್ಲಿ ಸಾಗುತ್ತಿದ್ದ ವಾಹನಕ್ಕೆ ತಾಗಿದೆ.ಶಿವಲಿಂಗಮ್ಮ ಕತ್ತು ಹಾಗೂ ಕೈ ಕಟ್ ಆಗಿದೆ.ಶಿವಲಿಂಗಮ್ಮಬಸ್ಥಳದಲ್ಲೇ ಮೃತಪಟ್ಟಿದ್ದಾರೆ.ನಂಜನಗೂಡು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…