ಖಾಸಗಿ ಫೋಟೋಗಳು ಹೇಳಿದ ಸತ್ಯ…ಲವ್ ಮಾಡಿದ ಹುಡುಗಿ ರಿವರ್ಸ್…ಭಗ್ನ ಪ್ರೇಮಿ ವಿರುದ್ದ FIR…ನಿಗೂಢ ಸ್ಥಳದಿಂದ ನ್ಯಾಯಕ್ಕಾಗಿ ಯುವಕನ ಮನವಿ…

ಖಾಸಗಿ ಫೋಟೋಗಳು ಹೇಳಿದ ಸತ್ಯ…ಲವ್ ಮಾಡಿದ ಹುಡುಗಿ ರಿವರ್ಸ್…ಭಗ್ನ ಪ್ರೇಮಿ ವಿರುದ್ದ FIR…ನಿಗೂಢ ಸ್ಥಳದಿಂದ ನ್ಯಾಯಕ್ಕಾಗಿ ಯುವಕನ ಮನವಿ…

ಬೀದರ್,ಜ30,Tv10 ಕನ್ನಡ

ಸತ್ಯದ ವಿಚಾರಗಳನ್ನ ಮುಚ್ಚಿಡಲು ಸಾಧ್ಯವಿಲ್ಲ ಎಂಬ ವಿಚಾರ ಬೀದರ್ ಜಿಲ್ಲೆಯ ಹುಮನಾಬಾದ್ ನ ಈ ಯುವಕನ ಜೀವನದಲ್ಲಿ ನಡೆದಿದೆ.ಯುವಕನನ್ನ ವರಿಸುವುದಾಗಿ ನಂಬಿಸಿ ಆತನ ಜೊತೆ ದೈಹಿಕ ಸಂಪರ್ಕ ಬೆಳೆಸಿದ ಯುವತಿಯೊಬ್ಬಳು ಕೊನೆಗೆ ಆತನ ವಿರುದ್ದವೇ ತಿರುಗಿಬಿದ್ದು ಸುಳ್ಳು ಪ್ರಕರಣ ದಾಖಲಿಸಿ ಪ್ರೇಮಿ ಊರನ್ನೇ ಬಿಡುವಂತೆ ಮಾಡಿದೆ.ಇಬ್ಬರ ನಡುವೆ ನಡೆದ ಕೆಲವು ಘಟನೆಗಳ ಫೋಟೋ ಅಸಲಿಯತ್ತನ್ನ ಪ್ರದರ್ಶಿಸಿದೆ.ಯುವತಿ ನೀಡಿದ ಸುಳ್ಳು ಕಂಪ್ಲೇಟ್ ನಿಂದಾಗಿ ಯುವಕನ ಭವಿಷ್ಯ ಬರ್ಬಾತ್ ಆಗುವ ಸ್ಥಿತಿ ಬಂದಿದೆ.ಯುವತಿಯ ಕುಟುಂಬದ ಟಾರ್ಚರ್ ಹಾಗೂ ಪೊಲೀಸರ ಬೇಟೆಯಿಂದ ಹೆದರಿದ ಹುಡುಗ ನಿಗೂಢ ಪ್ರದೇಶದಿಂದ ವಿಡಿಯೋ ಮಾಡಿ ನ್ಯಾಯ ದೊರಕಿಸುವಂತೆ ಪರಿಪರಿಯಾಗಿ ಬೇಡುತ್ತಿದ್ದಾನೆ.ಯುವಕನ ಮನವಿಗೆ ಪೂರಕವಾದಂತೆ ಇಬ್ಬರ ನಡುವಿನ ಫೋಟೋಗಳು ಸತ್ಯದ ಕಥೆ ಹೇಳುತ್ತಿದೆ.

ಬೀದರ್ ಜಿಲ್ಲೆ ಹುಮನಾಬಾದ್ ನ ಸಕ್ಕೂಭಾಯಿ ಹಾಗೂ ಲೋಕೇಶ್ ಪ್ರೇಮಿಗಳು.ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿರಿಸುವ ನಿರ್ಧಾರದಲ್ಲಿದ್ರು.ಈ ನಂಬಿಕೆ ಇಬ್ಬರ ನಡುವೆ ದೈಹಿಕ ಸಂಪರ್ಕವೂ ಸಾಕಷ್ಟು ಬಾರಿ ನಡೆದುಹೋದವು.ಇದಕ್ಕೆ ಕುರುಹಾಗಿ ಕೆಲವು ಫೋಟೋಗಳು ಇಬ್ಬರ ನೆನಪಿನಾರ್ಥಕವಾಗಿ ಸೇವ್ ಆಗಿತ್ತು.ಸಕ್ಕೂಭಾಯಿ ತನ್ನ ಮೊಬೈಲ್ ನ ತನ್ನ ಸಹೋದರನಿಗೆ ಬಳಸಲು ನೀಡಿದಾಗ ಅದರಲ್ಲಿದ್ದ ಖಾಸಗಿ ಫೋಟೋಗಳು ಮನೆಯಲ್ಲಿ ರಂಪಾಟಕ್ಕೆ ಕಾರಣವಾಯ್ತು.ಆದ್ರೆ ಇಲ್ಲಿ ನಡೆದದ್ದೇ ಬೇರೆ ಸಕ್ಕೂಭಾಯಿ ಮುಲಾಜಿಲ್ಲದೆ ರಿವರ್ಸ್ ಹೊಡೆದು ಪ್ರಿಯಕರನ ವಿರುದ್ದ ಇಲ್ಲಸಲ್ಲದ ಆರೋಪ ಹೊರೆಸಿ ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಬಿಟ್ಲು.

ಕಾಲೇಜಿಗೆ ಹೋಗುವ ವೇಳೆ ಹಿಂದೆ ಬಂದು ಲವ್ ಮಾಡುವಂತೆ ಕಿರುಕುಳ ನೀಡಿದ್ದಾನೆಂದು ಹಾಗೂ ಲವ್ ಮಾಡದೆ ಇದ್ರೆ ನಿನ್ನ ಹಾಗೂ ನಿನ್ನ ಕುಟುಂಬವನ್ನ ಖತಂ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.ಅಲ್ಲದೆ ಆನ್ ಲೈನ್ ನಲ್ಲಿ ಫೋಟೋಗಳನ್ನ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದಾನೆಂದು ಆರೋಪಿಸಿ ಪ್ರಕರಣ ದಾಖಲಿಸಿಬಿಟ್ಲು.ಯಾವಾಗ ಪ್ರಕರಣ ದಾಖಲಾಯ್ತೋ ಯುವಕ ಲೋಕೇಶ್ ಊರನ್ನೇ ತೊರೆದ.ಒಂದೆಡೆ ಯುವತಿ ಮನೆಯವರ ಹೆದರಿಕೆ ಮತ್ತೊಂದೆಡೆ ಪೊಲೀಸರ ಭೀತಿ.ಇಬ್ಬರ ಸಮ್ಮತಿಯಿಂದ ನಡೆದ ದೈಹಿಕ ಸಂಪರ್ಕ ಇದೀಗ ಒನ್ ವೇ ಮಾರ್ಗವಾಗಿದೆ.ಕುಟುಂಬದವರ ಒತ್ತಡಕ್ಕೆ ಮಣಿದ ಹುಡುಗಿ ರಿವರ್ಸ್ ಕಂಪ್ಲೇಟ್ ಕೊಟ್ಟಿದ್ದಾಳೆ.ಆದ್ರೆ ಅವರಿಬ್ಬರ ನಡುವಿನ ಖಾಸಗಿ ಫೋಟೋಗಳು ಅಸಲಿಯತ್ತನ್ನ ಸಾಬೀತಿ ಪಡಿಸಿವೆ.ಆನ್ ಲೈನ್ ನಲ್ಲಿ ಯುವತಿ ಇಂತಹ ಫೋಟೋಗಳನ್ನ ಹಾಕಲು ಸಾಧ್ಯವಿಲ್ಲ.ಯಾವುದೇ ಫೋಟೋದಲ್ಲೂ ಯುವತಿಯ ಮುಖದಲ್ಲಿ ಸಂತೋಷವೇ ಕಾಣುತ್ತಿದೆ ಹೊರತು ಬೆದರಿಕೆ ಕಾಣಿಸುತ್ತಿಲ್ಲ.ಬೆತ್ತಲೆ ಫೋಟೋಗಳಂತೂ ಇಬ್ಬರ ನಡುವಿನ ಉತ್ತಮ ಸಂಭಂಧಕ್ಕೆ ಸಾಕ್ಷಿಯಾಗಿದೆ.ಯುವತಿ ಹೇಳಿದ ಸುಳ್ಳು ಕಥೆಯನ್ನ ನಂಬಿದ ಹಳ್ಳಖೇಡ ಪೊಲೀಸರು ಹಿಂದು ಮುಂದು ಯೋಚಿಸದೆ ಯುವಕನನ್ನ ಜೈಲಿಗಟ್ಟುವ ಯೋಚನೆಯಲ್ಲೇ ಇದ್ದಾರೆ.ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದ ಯುವಕನೀಗ ಅತಂತ್ರ ಸ್ಥಿತಿ ಎದುರಿಸುತ್ತಿದ್ದಾನೆ.ತನಗೆ ಜೀವಭಯ ಇದೆ ಎಂದು ಅವಲತ್ತುಕೊಂಡು ಅಸಹಾಯಕನಾಗಿ ನಿಗೂಢ ಪ್ರದೇಶದಿಂದ ವಿಡಿಯೋ ಮಾಡಿ ಹಾಕಿ ನ್ಯಾಯಕ್ಕಾಗಿ ಬೇಡುತ್ತಿದ್ದಾನೆ.ಯುವತಿಯ ಅಸಲಿಯತ್ತನ್ನಬಪೊಲೀಸರು ಫೋಟೋ ಮೂಲಕ ಅರ್ಥ ಮಾಡಿಕೊಳ್ಳಬೇಕಿದೆ.ಕಾನೂನು ಎಲ್ಲರಿಗೂ ಒಂದೇ ಹುಡುಗಿ ತಪ್ಪು ಮಾಡಿದ್ರೆ ಒಂದು ಕಾನೂನು ಹುಡುಗ ತಪ್ಪು ಮಾಡಿದ್ರೆ ಒಂದು ಕಾನೂನು ಅಂತ ಇಲ್ಲ.ಸತ್ಯಾ ಸತ್ಯತೆಯನ್ನ ಅರಿತು ಪೊಲೀಸರು ನ್ಯಾಯಯುತವಾಗಿ ನಡೆದುಕೊಳ್ಳಬೇಕಿದೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *