
ಅಪಾರ್ಟ್ ಮೆಂಟ್ ನ ಫ್ಲಾಟ್ ಮಾರಾಟಕ್ಕೆ ಬಾಡಿಗೆದಾರನಿಂದ ಅಡ್ಡಿ…ಪಿಹೆಚ್ಡಿ ವ್ಯಾಸಂಗ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ…ಮಿಸ್ಸಿಂಗ್ ಕಂಪ್ಲೇಂಟ್ ದಾಖಲು…
- TV10 Kannada Exclusive
- February 25, 2025
- No Comment
- 85

ಮೈಸೂರು,ಫೆ25,Tv10 ಕನ್ನಡ
ಅಪಾರ್ಟ್ ಮೆಂಟ್ ನಲ್ಲಿ ಫ್ಲಾಟ್ ಮಾರಾಟ ಮಾಡಲು ಅಡ್ಡಿಪಡಿಸಿದ ಬಾಡಿಗೆದಾರನ ವರ್ತನೆಗೆ ಬೇಸತ್ತ ಪಿಹೆಚ್ಡ್ ವ್ಯಾಸಂಗ ಮಾಡುತ್ತಿದ್ದ ವ್ಯಕ್ತಿ ಮನನೊಂದು ನಾಪತ್ತೆಯಾಗಿರುವ ಪ್ರಕರಣವೊಂದು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಮುಂಬೈ ಮೂಲದ ಸತೀಶ್ ಚಂದ್ರ ನಾಪತ್ತೆಯಾದವರು.ಪತಿಯನ್ನ ಹುಡುಕಿಕೊಡುವಂತೆ ಪತ್ನಿ ರಮ್ಯ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ.
ಸತೀಶ್ ಚಂದ್ರ ರವರು ಮುಂಬೈ ನ ಟಾಟಾ ಇನ್ಸ್ಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ನಲ್ಲಿ ಪಿಹೆಚ್ಡ್ಮಿ ವ್ಯಾಸಂಗ ಮಾಡುತ್ತಿದ್ದರು.ಮೈಸೂರು ವಿಭಾಗದ ಬಗ್ಗೆ ಹೆಚ್ಚಿನ ರಿಸರ್ಚ್ ಮಾಡಲು ಮೈಸೂರಿಗೆ ಬಂದಿದ್ದರು.ಮೈಸೂರಿನ ಹೂಟಗಳ್ಖಿಲ್ಲಿ ಪತ್ನಿ ರಮ್ಯ ಅಪಾರ್ಟ್ ಮೆಂಟ್ ನಲ್ಲಿ ಫ್ಲಾಟ್ ಖರೀದಿಸಿದ್ದರು.ಫ್ಲಾಟ್ ನಲ್ಲಿ ಕುಶಾಲಪ್ಪ ಎಂಬುವರು ಬಾಡಿಗೆ ಇದ್ದರು.ಸತೀಶ್ ಚಂದ್ರ ರವರಿಗೆ ಆರ್ಥಿಕ ಸಮಸ್ಯೆ ಎದುರಾಗಿ ಫ್ಲಾಟ್ ಮಾರಾಟ ಮಾಡಲು ಮುಂದಾಗಿದ್ದರು.ಆದರೆ ಕುಶಾಲಪ್ಪ ರವರು ಸಹಕರಿಸದ ಕಾರಣ ಮಾರಾಟ. ಮಾಡಲು ಸಾಧ್ಯವಾಗಿಲ್ಲ.ಇದರಿಂದ ಮನನೊಂದ ಸತೀಶ್ ಚಂದ್ರ 22-02-2025 ರಂದು ಮನೆಬಿಟ್ಟು ಹೋಗಿದ್ದಾರೆ.ಸತೀಶ್ ಚಂದ್ರ ರನ್ನ ಪತ್ನಿ ಹುಡುಕಾಡಿದ್ದಾರೆ.ಪತ್ತೆಯಾಗದ ಹಿನ್ನಲೆ ಹುಡುಕಿಕೊಡುವಂತೆ ಪತ್ನಿ ರಮ್ಯ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ…