
ನಾಡಿನಾದ್ಯಂತ ಶಿವರಾತ್ರಿ ಹಬ್ಬಕ್ಕೆ ಸಕಲ ಸಿದ್ಧತೆ…ತ್ರಿಣೇಶ್ವರ ದೇವಾಲಯ ತಲುಪಿದ ಚಿನ್ನದ ಕೊಳಗ…
- TV10 Kannada Exclusive
- February 25, 2025
- No Comment
- 45



ಮೈಸೂರು,ಫೆ25,Tv10 ಕನ್ನಡ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶಿವರಾತ್ರಿ ಆಚರಣೆಗೆ ಶಿವನ ದೇಗುಲಗಳಲ್ಲಿ ಸಕಲ ಸಿದ್ದತೆ ನಡೆಯುತ್ತಿದೆ.
ಜಗತ್ಪ್ರಸಿದ್ಧ ಅರಮನೆ ಆವರಣದಲ್ಲಿರುವ
ತ್ರಿಣೇಶ್ವರ ಸ್ವಾಮಿಯ ದೇಗುಲದಲ್ಲಿ ಮೂಲದೇವರಿಗೆ ಚಿನ್ನದ ಮುಖವಾಡ ಧಾರಣೆ ಮಾಡಲಾಗುತ್ತದೆ.
ವರ್ಷಕ್ಕೊಮ್ಮೆ ಮಾತ್ರ ಶಿವನ ಚಿನ್ನದ ಮುಖವಾಡ ಧಾರಣೆ ಮಾಡಲಾಗುತ್ತದೆ.
ಜಯಚಾಮರಾಜೇಂದ್ರ ಒಡೆಯರ್ ಅವರು ಕಾಣಿಕೆ ರೂಪದಲ್ಲಿ ಚಿನ್ನದ ಮುಖವಾಡ ನೀಡಿದ್ದಾರೆ.ಶ್ರೀ ಕಂಠದತ್ತನರಸಿಂಹರಾಜ ಒಡೆಯರ್ ಜನಿಸಿದ ನೆನಪಿನಾರ್ಥ 1953ರಲ್ಲಿ ಚಿನ್ನದ ಮುಖವಾಡ ನೀಡಿದ್ದಾರೆ.
ವರ್ಷಪೂರ್ತಿ ಜಿಲ್ಲಾ ಖಜಾನೆಯಲ್ಲಿ ಇರುವ ಚಿನ್ನದ ಮುಖವಾಡ
ಶಿವರಾತ್ರಿ ಹಬ್ಬದ ದಿನದಂದು ಮಾತ್ರ ದೇವರಿಗೆ ಧಾರಣೆ ಮಾಡಲಾಗುತ್ತದೆ.
ನಂತರ ಜಿಲ್ಲಾ ಖಜಾನೆಯಲ್ಲಿ ಭದ್ರವಾಗಿ ಇಡಲಾಗುತ್ತದೆ.
ಪೊಲೀಸ್ ಬಿಗಿ ಭದ್ರತೆಯೊಂದಿಗೆ ಚಿನ್ನದ ಮುಖವಾಡ ತ್ರಿಣೇಶ್ವರಸ್ವಾಮಿ ದೇವಸ್ಥಾನದ ಸ್ಥಾನಿಕ ವೆಂಕಟೇಶ್ ಅವರಿಗೆ ಹಸ್ತಾಂತರಿಸಲಾಗಿದೆ.
ಸುಮಾರು 11 ಕೆಜಿ ತೂಕವಿದೆ.ನಾಳೆ ಬೆಳಿಗ್ಗೆಯಿಂದ ಮಧ್ಯ ರಾತ್ರಿಯವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ದೇವರಿಗೆ ಧಾರಣೆ ಮಾಡುವ ಚಿನ್ನದ ಕೊಳಗವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತುರರಾಗಿದ್ದಾರೆ…