
ಶೌಚಾಲಯ ಗುಂಡಿಯಲ್ಲಿ ಮನುಷ್ಯನ ಬುರುಡೆ,ಮೂಳೆಗಳು ಪತ್ತೆ…ಪೊಲೀಸರು ದೌಡು…
- TV10 Kannada Exclusive
- February 27, 2025
- No Comment
- 552


ಹೆಚ್.ಡಿ.ಕೋಟೆ,ಫೆ27,Tv10 ಕನ್ನಡ
ಕುಸಿದು ಬಿದ್ದಿದ್ದ ಶೌಚಾಲಯ ದುರಸ್ಥಿ ವೇಳೆ ಗುಂಡಿಯಲ್ಲಿ ಮನುಷ್ಯನ ಬುರುಡೆ,ಮೂಳೆಗಳು ಪತ್ತೆಯಾದ ಘಟನೆ
ಹೆಚ್ ಡಿ ಕೋಟೆ ತಾಲೂಕಿನ ಜೊಂಪನಹಳ್ಳಿಯ ಚಿನ್ನಪ್ಪ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ದಾಸಪ್ರಕಾಶ್ ಎಂಬವರ ಮನೆಯ ಹಿತ್ತಲಿನ ಶೌಚಾಲಯದ ಗುಂಡಿಯಲ್ಲಿ ಪತ್ತೆಯಾಗಿದೆ.
ಶೌಚಾಲಯದ ಗುಂಡಿ ಕುಸಿದು ಬಿದ್ದ ಹಿನ್ನೆಲೆ
ದುರಸ್ತಿ ಕಾರ್ಯ ನಡೆಸಲು ಮನೆ ಮಾಲಿಕರು ಆರಂಭಿಸಿದ್ದರು.ಈ ವೇಳೆ ತೆಗೆದಿದ್ದ ಗುಂಡಿಯಲ್ಲಿ ಮೂಳೆಗಳು ಪತ್ತೆಯಾಗಿದೆ.
ತಕ್ಷಣ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಸ್ಥಳಕ್ಕೆ ಹೆಚ್ ಡಿ ಕೋಟೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸರ್ಕಲ್ ಇನ್ಸಪೆಕ್ಟರ್ ಶಬೀರ್ ಹುಸೇನ್, ಡಿವೈಎಸ್‌ಪಿ ಗೋಪಾಲಕೃಷ್ಣ ಭೇಟಿ ನೀಡಿದ್ದಾರೆ.
7 ತಿಂಗಳುಗಳಿಂದ ದಾಸ್ ಪ್ರಕಾಶ್ ಕಾಣೆಯಾಗಿದ್ದು ಈಗ ಮೂಳೆ ಪತ್ತೆಯಾಗಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ.
ಮೂಳೆಗಳನ್ನ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ…