
ಗೃಹಸಚಿವರ ನಿವಾಸಕ್ಕೆ ಭೇಟಿ ನೀಡುವ ಪೊಲೀಸ್ ಸಿಬ್ಬಂದಿಗಳಿಗೆ ಮೂಗುದಾರ…ಅನುಮತಿ ಪಡೆಯುವಂತೆ ಸೂಚನೆ…
- TV10 Kannada Exclusive
- February 27, 2025
- No Comment
- 297

ಬೆಂಗಳೂರು,ಫೆ27,Tv10 ಕನ್ನಡ
ಸಂಭಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯದೆ ಗೃಹಸಚಿವರ ನಿವಾಸಕ್ಕೆ ಭೇಟಿ ನೀಡುತ್ತಿರುವ ಪೊಲೀಸ್ ಸಿಬ್ಬಂದಿಗಳ ವರ್ತನೆಗೆ ಬ್ರೇಕ್ ಹಾಕಲಾಗಿದೆ.ಮುಂದಿನ ದಿನಗಳಲ್ಲಿ ಈ ಸಂಭಂಧ ಅನುಮತಿ ಪಡೆಯುವಂತೆ ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ ಉಪಪೊಲೀಸ್ ಆಯುಕ್ತರಾದ ಅನಿತಾ.ಬಿ.ಹದ್ದಣ್ಣವರ್ ನೋಟೀಸ್ ನೀಡಿದ್ದಾರೆ.ಪೂರ್ವಾನುಮತಿ ಪಡೆಯದೆ ಗೃಹಸಚಿವರ ನಿವಾಸಕ್ಕೆ ಭೇಟಿ ನೀಡುವುದು ಇಲಾಖಾ ನಿಯಮ ಮತ್ತು ನಿಭಂಧನೆಗಳಿಗೆ ವಿರುದ್ದವಾಗಿರುತ್ತದೆ.ಇನ್ನುಮುಂದೆ ಗೃಹಸಚಿವರ ನಿವಾಸಕ್ಕೆ ಭೇಟಿ ನೀಡುವ ಮುನ್ನ ಮಾನ್ಯ ಪೊಲೀಸ್ ಪ್ರಧಾನ ಕಚೇರಿಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯುವಂತೆ ಸೂಚನೆ ನೀಡಲಾಗಿದೆ.ಈ ನಿಯಮಗಳನ್ನ ಪಾಲನೆ ಮಾಡುವಂತೆ ಠಾಣಾಧಿಕಾರಿಗಳಿಗೂ ನೋಟೀಸ್ ನಲ್ಲಿ ತಿಳಿಸಲಾಗಿದೆ…