
ಪ್ರತಾಪ್ ಸಿಂಹ ಟಿಕೆಟ್ ಕಳೆದುಕೊಂಡು ಇಂದಿಗೆ ಒಂದು ವರ್ಷ…ಜನರ ಪ್ರೀತಿ ವಿಶ್ವಾಸಕ್ಕೆ ಫಿದಾ…
- TV10 Kannada Exclusive
- March 14, 2025
- No Comment
- 87
ಮೈಸೂರು,ಮಾ14,Tv10 ಕನ್ನಡ
ಸಂಸದ ಸ್ಥಾನದ ಟಿಕೆಟ್ ಕಳೆದುಕೊಂಡು ಇವತ್ತಿಗೆ ಒಂದು ವರ್ಷವಾಯಿತು
ಆದರೆ ಕಾರ್ಯಕರ್ತರ ಪ್ರೀತಿ, ಜನರ ಆಶೀರ್ವಾದ, ಪ್ರೋತ್ಸಾಹ ಇವತ್ತಿಗೂ ಹಾಗೇ ಇದೆ ಎಂದುಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಂಸದ ಪ್ರತಾಪಸಿಂಹ ಪೋಸ್ಟ್ ಹಾಕಿದ್ದಾರೆ.
ನೀವು ಕೊಟ್ಟಿರುವ ಈ ಶಕ್ತಿಯಿಂದಲೇ ಇವತ್ತಿಗೂ ಸೈದ್ಧಾಂತಿಕ ಕೆಲಸ ನಡೆಯುತ್ತಿದೆ.
ನನ್ನ ಹೋರಾಟವನ್ನು 8 FIR ಹಾಕಿಸಿಕೊಂಡರೂ ಮುಂದುವರಿಸುತ್ತಿದ್ದೇನೆ.
ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದ ಹೀಗೇ ನಿರಂತರವಾಗಿರಲಿ ಧನ್ಯವಾದಗಳು ಎಂದು
ಸಾಮಾಜಿಕ ಜಾಲತಾಣದ ಮೂಲಕ ಪ್ರತಾಪಸಿಂಹ ಥ್ಯಾಂಕ್ಸ್ ಹೇಳಿದ್ದಾರೆ…