
ಟ್ರೇಡಿಂಗ್ ನಲ್ಲಿ ಹೆಚ್ಚಿನ ಲಾಭದ ಆಮಿಷ…17 ಲಕ್ಷ ವಂಚನೆ…
- TV10 Kannada Exclusive
- March 13, 2025
- No Comment
- 56
ಮೈಸೂರು,ಮಾ13,Tv10 ಕನ್ನಡ
ಟ್ರೇಡಿಂಗ್ ನಲ್ಲಿ ಹೆಚ್ಚಿನ ಅಭಾಂಶ ಬರುವುದಾಗಿ ನಂಬಿಸಿ ಮೈಸೂರಿನ ವ್ಯಕ್ತಿಯೊಬ್ಬರಿಗೆ 17 ಲಕ್ಷಕ್ಕೆ ಪಂಗನಾಮ ಹಾಕಿದ್ದಾರೆ.ಕುಂಬಾರಕೊಪ್ಪಲಿನ ನಿವಾಸಿ ವಿನಯ್ ಕುಮಾರ್ ಎಂಬುವರೇ ಹಣ ಕಳೆದುಕೊಂಡವರು.ಇನ್ಸ್ ಸ್ಟಾಗ್ರಾಂ ಮೂಲಕ ವಂಚಕ ಪರಿಚಯ ಮಾಡಿಕೊಂಡು ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿದ್ದಾರೆ.ವ್ಯಕ್ತಿಯ ಮಾತನ್ನ ನಂಬಿ ವಿನಯ್ ಕುಮಾರ್ ರವರು ಮೊದಲು 8 ಸಾವಿರ ಇನ್ವೆಸ್ಟ್ ಮಾಡಿದ್ದಾರೆ.ಮೊದಲ ಹೂಡಿಕೆಗೆ ಲಾಭ ಬಂದಿದೆ.ನಂತರ ವಿವಿದ ಹಂತಗಳಲ್ಲಿ ಒಟ್ಟು 17.09 ಲಕ್ಷ ಹಣ ಹೂಡಿದ್ದಾರೆ.ಖಾತೆಯಲ್ಲಿ ಹೆಚ್ಚಿನ ಮೊತ್ತ ಲಾಭ ತೋರಿಸಿದೆ.ಹಣ ವಿತ್ ಡ್ರಾ ಮಾಡಲು ಮುಂದಾದಾಗ 5 ಲಕ್ಷ ಪಾವತಿಸುವಂತೆ ತಿಳಿಸಿದ್ದಾರೆ.ವ್ಯಕ್ತಿಯ ಬಗ್ಗೆ ಅನುಮಾನ ಬಂದಿದ್ದು ನಂತರ ತಾವು ಮೋಸ ಹೋಗಿರುವುದನ್ನ ಖಚಿತಪಡಿಸಿಕೊಂಡ ವಿನಯ್ ಕುಮಾರ್ ಸೆನ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…