ಅಪ್ರಾಪ್ತಳ ಮೇಲೆ ಚಿಕ್ಕಪ್ಪನಿಂದಲೇ ಅತ್ಯಾಚಾರ…ಎಸ್.ಎಸ್.ಎಲ್.ಸಿ.ವಿಧ್ಯಾರ್ಥಿನಿ ಗರ್ಭಿಣಿ…ಕಾಮುಕ ಚಿಕ್ಕಪ್ಪ ಅಂದರ್…

ಅಪ್ರಾಪ್ತಳ ಮೇಲೆ ಚಿಕ್ಕಪ್ಪನಿಂದಲೇ ಅತ್ಯಾಚಾರ…ಎಸ್.ಎಸ್.ಎಲ್.ಸಿ.ವಿಧ್ಯಾರ್ಥಿನಿ ಗರ್ಭಿಣಿ…ಕಾಮುಕ ಚಿಕ್ಕಪ್ಪ ಅಂದರ್…

ನಂಜನಗೂಡು,ಮಾ26,Tv10 ಕನ್ನಡ

ಶಾಲೆಗೆ ತೆರಳಿದ್ದ ವಿಧ್ಯಾರ್ಥಿನಿಯನ್ನ ಮನೆಗೆ ಕರೆತಂದ ಸ್ವಂತ ಚಿಕ್ಕಪ್ಪ ಅತ್ಯಾಚಾರವೆಸಗಿದ ಘಟನೆ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.ನಂಜನಗೂಡು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.10 ನೇ ತರಗತಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.ಕಾಮುಕ ಚಿಕ್ಕಪ್ಪನನ್ನ ಪೊಲೀಸರು ಕಂಬಿ ಎಣಿಸಲು ಕಳಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ಪೀರಿಯೆಡ್ಸ್ ಆಗಿಲ್ಲವೆಂಬ ಕಾರಣಕ್ಕೆ ಬಾಲಕಿಯನ್ನ ವೈದ್ಯರು ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.ನಂಜುಂಡಸ್ವಾಮಿ ಅತ್ಯಾಚಾರವೆಸಗಿದ ಕಾಮುಕ.ನಂಜನಗೂಡಿನ ಬಾಲಕಿಯರ ಪ್ರೌಡಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನ ಜನವರಿಯಲ್ಲಿ ಪುಸಲಾಯಿಸಿ ಮನೆಗೆ ಕರೆತಂದಿದ್ದಾನೆ.ನಂತರ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿ ಯಾರಿಗೂ ತಿಳಿಸಬಾರದೆಂದು ತಿಳಿಸಿ ಅಮಾಯಕನಂತೆ ಮತ್ತೆ ಶಾಲೆಗೆ ಬಿಟ್ಟಿದ್ದಾನೆ.ಪೀರಿಯೆಡ್ಸ್ ನಲ್ಲಿ ವೆತ್ಯಾಸ ಕಂಡು ಬಂದು ವೈದ್ಯರ ಬಳಿ ತೆರಳಿದಾಗ ಬಾಲಕಿ 6 ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ.ಮಕ್ಕಳ ಮತ್ತು ಮಹಿಳಾ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಬಾಲಕಿಯನ್ನ ತಮ್ಮ ವಶಕ್ಕೆ ಪಡೆದಿದ್ದಾರೆ.ನಂಜುಂಡಸ್ವಾಮಿ ವಿರುದ್ದ ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.ಎಸ್.ಎಸ್.ಎಲ್.ಸಿ.ಪರೀಕ್ಷೆಗಳು ನಡೆಯುತ್ತಿರುವುದರಿಂದ ನೊಂದ ಬಾಲಕಿಯನ್ನ ಬಾಲಮಂದಿರದಿಂದ ಪರೀಕ್ಷಾ ಕೇಂದ್ರಕ್ಕೆ ಪೊಲೀಸರ ಭದ್ರತೆಯೊಂದಿಗೆ ಕರೆತರಲಾಗುತ್ತಿದೆ ಎಂದು ಹೇಳಲಾಗಿದೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *