
ಪ್ರೀತಿ ಮಾಡೋಕ್ಕೆ ನನ್ನ ಮಗಳೇ ಬೇಕಾ…? ಪುತ್ರಿಯ ಲವರ್ ಗೆ ತಂದೆಯಿಂದ ಹಿಗ್ಗಾ ಮುಗ್ಗಾ ಹಲ್ಲೆ…ಮೂವರ ವಿರುದ್ದ FIR…
- TV10 Kannada Exclusive
- March 26, 2025
- No Comment
- 161
ಮೈಸೂರು,ಮಾ26,Tv10 ಕನ್ನಡ
ಮಗಳನ್ನ ಪ್ರೀತಿಸುತ್ತಿದ್ದ ಪ್ರಿಯಕರನ ಮೇಲೆ ತಂದೆ ಹಾಗೂ ಇಬ್ಬರು ಸಂಭಂಧಿಕರು ಸಾರ್ವಜನಿಕ ರಸ್ತೆಯಲ್ಲಿ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾಟರ್ ಟ್ಯಾಂಕ್ ಬಳಿ ನಡೆದಿದೆ.ಪ್ರಿಯತಮೆಯ ತಂದೆ ಹಾಗೂ ಇಬ್ಬರು ಸಂಭಂಧಿಕರು ಸೇರಿದಂತೆ ಮೂವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ್(24) ಹಲ್ಲೆಗೆ ಒಳಗಾದ ಪ್ರಿಯತಮ.ಪ್ರಿಯತಮೆಯ ತಂದೆ ಕುಮಾರ್ ಹಾಗೂ ಅಕ್ಕನ ಮಕ್ಕಳಾದ ಮೋಹನ್ ಮತ್ತು ಅಭಿ ವಿರುದ್ದ ಪ್ರಕರಣ ದಾಖಲಾಗಿದೆ.
ಹೆಚ್.ಡಿ ಕೋಟೆಯ ಸೋನಳ್ಳಿ ಗ್ರಾಮದ ಕುಮಾರ್ ಮಗಳನ್ನ ಅಶೋಕ್ ಪ್ರೀತಿಸುತ್ತಿದ್ದಾರೆ.ಈ ವಿಚಾರದಲ್ಲಿ ಹುಡುಗಿ ತಂದೆ ಕುಮಾರ್ ವಿರೋಧವಿದೆ.ಸಂಭಂಧಿಕರೇ ಆಗಿದ್ರೂ ವಿರೋಧ ವ್ಯಕ್ತವಾಗಿದೆ.ಈ ಹಿನ್ನಲೆ ವಿಜಯನಗರ ವಾಟರ್ ಟ್ಯಾಂಕ್ ಬಳಿ ನಿಂತಿದ್ದ ಅಶೋಕ್ ರನ್ನ ಅಡ್ಡಗಟ್ಟಿದ ಕುಮಾರ್,ಮೋಹನ್,ಅಭಿ ರವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ಪ್ರೀತಿ ಮಾಡಲು ನನ್ನ ಮಗಳೇ ಬೇಕ,ನನ್ನ ಮಗಳನ್ನ ಪ್ರೀತಿಸಲು ಎಷ್ಟು ಧೈರ್ಯ ನಿನಗೆ ಎಂದು ಆವಾಜ್ ಹಾಕಿ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದಾರೆ.ಗಾಯಗೊಂಡ ಅಶೋಕ್ ಚಿಕಿತ್ಸೆ ಪಡೆದು ಮೂವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…