
ಗ್ರಾಮದಹಬ್ಬ ಮುಗಿಸಿ ಬಂದ ರಿಯಲ್ ಎಸ್ಟೇಟ್ ಉದ್ಯಮಿಗೆ ಶಾಕ್…ಚಿನ್ನಾಭರಣ ಸೇರಿದಂತೆ 41.67 ಲಕ್ಷ ನಗದು ಕಳುವು…
- CrimeTV10 Kannada Exclusive
- March 28, 2025
- No Comment
- 171
ಮೈಸೂರು,ಮಾ28,Tv10 ಕನ್ನಡ
ಗ್ರಾಮದ ಹಬ್ಬ ಮುಗಿಸಿ ಹಿಂದಿರುಗಿದ ರಿಯಲ್ ಎಸ್ಟೇಟ್ ಉದ್ಯಮಿಗೆ ಕಳ್ಳರು ಶಾಕ್ ಕೊಟ್ಟಿದ್ದಾರೆ.ಮನೆಯಲ್ಲಿದ್ದ 34.67 ಲಕ್ಷ ಕ್ಯಾಶ್ 7 ಲಕ್ಷ ಮೌಲ್ಯದ 89 ಗ್ರಾಂ ಚಿನ್ನಾಭರಣ ಕಳ್ಳರ ಪಾಲಾಗಿದೆ.ಈ ಸಂಭಂಧ ರಿಯಲ್ ಎಸ್ಟೇಟ್ ಉದ್ಯಮಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಜ್ರೇಶ್ವರಿ ಡೆವಲಪರ್ಸ್ ಹೆಸರಿನಲ್ಲಿ ನಡೆಸುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯ ಸಹೋದರ ಶ್ರೀ ಬಸವರಾಜು ಎಂಬುವರ ಮನೆಯಲ್ಲಿ ಕಳ್ಳತನ ಆಗಿದೆ.ವಿಜಯನಗರ 3 ನೇ ಹಂತದಲ್ಲಿರುವ ಮನೆಯಲ್ಲಿ ಕಳ್ಳತನವಾಗಿದೆ.ಸಹೋದರ ದೀಪಕ್ ನಡೆಸುತ್ತಿದ್ದ ರಿಯಲ್ ಎಸ್ಟೇಟ್ ವ್ಯವಹಾರವನ್ನ ಶ್ರೀಬಸವರಾಜು ರವರು ನೋಡಿಕೊಳ್ಳುತ್ತಿದ್ದರು.ಕಳೆದ ಮೂರು ತಿಂಗಳಲ್ಲಿ ವ್ಯವಹಾರದಿಂದ ಬಂದ ಹಣವನ್ನ ದೀಪಕ್ ರವರು ಸೇಫ್ ಆಗಿರಲೆಂದು ಸಹೋದರ ಶ್ರೀ ಬಸವರಾಜು ರವರ ಮನೆಯಲ್ಲಿ ಇರಿಸಿದ್ದರು.
ಚಾಮರಾಜನಗರ ಶಿವನಸಮುದ್ರದಲ್ಲಿ ಗ್ರಾಮದ ಹಬ್ಬ ಇದ್ದ ಕಾರಣ ಶ್ರೀಬಸವರಾಜು ಸಹೋದರಿಯನ್ನ ಮನೆಯಲ್ಲಿ ಇರಿಸಿ ತೆರಳಿದ್ದರು.ಹಬ್ಬಕ್ಕೆ ಸಹೋದರಿ ಸಹ ತೆರಳಿದ್ದರು.ಹಬ್ಬ ಮುಗಿಸಿ ಮಾ27 ರಂದು ಹಿಂದಿರುಗಿದ ಶ್ರೀ ಬಸವರಾಜ್ ಗೆ ಶಾಕ್ ಆಗಿದೆ.ಮನೆ ಬಾಗಿಲು ಕಿಟಕಿ ತೆರದ ಸ್ಥಿತಿಯಲ್ಲಿದೆ.ಒಳಗೆ ಪ್ರವೇಶಿಸಿ ಪರಿಶೀಲಿಸಿದಾಗ ಕ್ಯಾಶ್ 34.67 ಲಕ್ಷ ಹಾಗೂ 7 ಲಕ್ಷ ಮೌಲ್ಯದ 89 ಗ್ರಾಂ ಚಿನ್ನಾಭರಣ ನಾಪತ್ತೆಯಾಗಿದೆ.ಈ ಸಂಭಂಧ ವಿಜಯನಗರ ಠಾಣೆಯಲ್ಲಿ ಶ್ರೀ ಬಸವರಾಜು ಪ್ರಕರಣ ದಾಖಲಿಸಿ ಕಳ್ಳರ ಪತ್ತೆಗೆ ಮನವಿ ಮಾಡಿದ್ದಾರೆ…