
ಪೋಲೀಸರನ್ನ ಕಂಡು ಓಡಿದ ಕಳ್ಳ…ಬ್ಯಾಗ್ ನಲ್ಲಿ ಸಿಕ್ಕಿದ್ದು ನಗದು ಸೇರಿ 7.20 ಲಕ್ಷ ಮೌಲ್ಯದ ಚಿನ್ನಾಭರಣ…
- TV10 Kannada Exclusive
- March 26, 2025
- No Comment
- 274
ಮೈಸೂರು,ಮಾ26,Tv10 ಕನ್ನಡ
ಗಸ್ತಿನಲ್ಲಿದ್ದ ಪೊಲೀಸರನ್ನ ಕಂಡೊಡನೆ ಸ್ಕೂಟರ್ ಬಿಟ್ಟು ಓಡಿಹೋದ ಕಳ್ಳನ ಬ್ಯಾಗ್ ನಲ್ಲಿ ನಗದು ಸೇರಿ 7.20 ಲಕ್ಷ ಮೌಲ್ಯದ ಚಿನ್ನಾಭರಣ ದೊರೆತಿದೆ.ಮನೆ ಕಳ್ಳತನ ಮಾಡಿ ಮಾಲು ಸಮೇತ ಎಸ್ಕೇಪ್ ಆಗುತ್ತಿದ್ದ ವೇಳೆ ಪೊಲೀಸರು ದರ್ಶನವಾಗಿದ್ದಾರೆ.ಈ ವೇಳೆ ಕಳ್ಳ ತಪ್ಪಿಸಿಕೊಂಡನಾದರೂ ಕಳುವು ಮಾಡಿದ ಪದಾರ್ಥ ಪೊಲೀಸರಿಗೆ ದೊರೆತಿದೆ.
ಇಂದು ಮುಂಜಾನೆ 4.10 ವೇಳೆಯಲ್ಲಿ ಘಟನೆ ನಡೆದಿದೆ.ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಟಗಳ್ಳಿ ಸಿಗ್ನಲ್ ಬಳಿ ನಡೆದಿದೆ.ವಿಜಯನಗರ ಠಾಣೆ ಸಿಬ್ಬಂದಿಯಾದ ಅನಂತ್ ರವರು ರಾತ್ರಿ ಪಾಳಿ ಗಸ್ತಿನಲ್ಲಿದ್ದರು.ಇಂದು ಮುಂಜಾನೆ ಹೂಟಗಳ್ಳಿ ಬಳಿ ಗಸ್ತಿನಲ್ಲಿದ್ದಾಗ ಅಸ್ಪಷ್ಟವಾಗಿ ಕಾಣುತ್ತಿದ್ದ ನಂಬರ್ ಪ್ಲೇಟ್ ಇದ್ದ ಸ್ಕೂಟರ್ ನಲ್ಲಿ ವ್ಯಕ್ತಿಯೊಬ್ಬ ತೆರಳುತ್ತಿದ್ದ.ಈ ವೇಳೆ ಪೊಲೀಸರು ಎದುರಾಗಿ ಅಡ್ಡಗಟ್ಟಿ ನಿಲ್ಲಿಸಿದಾಗ ವ್ಯಕ್ತಿ ಪರಾರಿಯಾದ.ಆಗ ಪೊಲೀಸರೂ ಸಹ ಬೆನ್ನಟ್ಟಿದ್ದಾರೆ.ಆದ್ರೆ ವ್ಯಕ್ತಿ ಕೈಗೆ ಸಿಕ್ಕಿಲ್ಲ.ನಂತರ ವಾಪಸ್ ಸ್ಕೂಟರ್ ಬಳಿ ಬಂದು ಪರಿಶೀಲನೆ ನಡೆಸಿದಾಗ ಬ್ಯಾಗ್ ದೊರೆತಿದೆ.ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿ ನಂತರ ಸ್ಕೂಟರ್ ಹಾಗೂ ಬ್ಯಾಗ್ ಠಾಣೆಗೆ ತಂದು ತೆರೆದು ನೋಡಿದಾಗ 50 ಸಾವಿರ ನಗದು ಹಾಗೂ 90 ಗ್ರಾಂ ಚಿನ್ನಾಭರಣ ಕಂಡು ಬಂದಿದೆ.ಇದರ ಒಟ್ಟು ಮೌಲ್ಯ 7.20 ಲಕ್ಷ ಆಗಿದೆ.ಯಾವುದೋ ಸ್ಥಳದಲ್ಲಿ ಮನೆಗಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ ವೇಳೆ ಕಳ್ಳ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ.ಸಧ್ಯ ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಪೊಲೀಸರು ಕಳ್ಳನ ಪತ್ತೆಗಾಗಿ ಬಲೆ ಬೀಸಿದ್ದಾರೆ…