
ಅಕ್ರಮ ಮಧ್ಯ ಸೇವನೆ ಹಿನ್ನಲೆ…ಆದಿವಾಸಿ ಸಾವು…
- CrimeTV10 Kannada Exclusive
- March 31, 2025
- No Comment
- 33
ನಂಜನಗೂಡು,ಮಾ31,Tv10 ಕನ್ನಡ
ಅಕ್ರಮ ಮಧ್ಯ ಸೇವಿಸಿ ಆದಿವಾಸಿ ಸಾವನ್ನಪ್ಪಿದ ಘಟನೆ ನಂಜನಗೂಡು ತಾಲೂಕು ಹೆಡಿಯಾಲ ಗ್ರಾಮದ ನಾಗಣಪುರ ಆದಿವಾಸಿ ಕಾಲೋನಿಯಲ್ಲಿ ನಡೆದಿದೆ.ಅಕ್ರಮ ಮಧ್ಯ ಹಾವಳಿಗೆ ಇದು ಮೂರನೇ ಬಲಿಯಾಗಿದೆ.
ಪೆಟ್ಟಿ ಮತ್ತು ಗಿರಣಿ ಅಂಗಡಿಗಳಲ್ಲಿ ಸಿಗುವ ಅಕ್ರಮ ಮಧ್ಯ ಸೇವಿಸಿ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ.
ರಾಜು (54) ಮೃತ ವ್ಯಕ್ತಿ.
ತಡರಾತ್ರಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮನೆಯ ಮುಂಭಾಗದಲ್ಲಿಯೇ ಕಂಠಪೂರ್ತಿ ಕುಡಿದು ಸಾವನ್ನಪ್ಪಿದ್ದಾನೆಂದು ಹೇಳಲಾಗಿದೆ.
ಕಳೆದ 20 ದಿನಗಳ ಹಿಂದೆ ಈರೇಗೌಡನ ಹುಂಡಿ ಗ್ರಾಮದ ಚೆನ್ನಪ್ಪ ಆಗೋ ಬಳ್ಳೂರ ಹುಂಡಿ ಗ್ರಾಮದ ಮಹದೇವ ಎಂಬುವರು ಅಕ್ರಮ ಮಧ್ಯ ಸೇವಿಸಿ ಬಲಿಯಾಗಿದ್ದರು.
ಇದೀಗ ಅಕ್ರಮ ಮಧ್ಯ ಸೇವಿಸಿ ಮೂರನೇ ವ್ಯಕ್ತಿ ಬಲಿಯಾಗಿದ್ದಾನೆ.
ನಂಜನಗೂಡು ತಾಲೂಕಿನಲ್ಲಿ ಅಕ್ರಮ ಮಧ್ಯಕ್ಕೆ ಕಡಿವಾಣ ಇಲ್ಲದಂತಾಗಿದೆ.
ಜನಪ್ರತಿನಿಧಿಗಳು ಮತ್ತು ಅಬಕಾರಿ ಅಧಿಕಾರಿಗಳ ನಿರ್ಲಕ್ಷತನದಿಂದ ಗ್ರಾಮೀಣ ಪ್ರದೇಶದ ಪೆಟ್ಟಿ ಮತ್ತು ಗಿರಣಿ ಅಂಗಡಿಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮಧ್ಯ ದಂಧೆಗೆ ಬ್ರೇಕ್ ಬೀಳುವುದೇ…?