
ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಮತ್ತು ಕಾರ್ಯಾಚರಣೆ ಸಮಿತಿ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಸ್.ಗುರುಸ್ವಾಮಿ ನೇಮಕ…
- TV10 Kannada Exclusive
- March 31, 2025
- No Comment
- 119



ಮೈಸೂರು,ಮಾ31,Tv10 ಕನ್ನಡ
ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಕಾರ್ಯಾಚರಣೆ ಸಮಿತಿಯ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಸ್.ಗುರುಸ್ವಾಮಿ ನೇಮಕವಾಗಿದ್ದಾರೆ.ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸಮಿತಿಯ ವತಿಯಿಂದ ನಡೆದ ಪದಾಧಿಕಾರಿಗಳ ಸಮಾವೇಶದಲ್ಲಿ ಎಸ್.ಗುರುಸ್ವಾಮಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಗುರುಸ್ವಾಮಿ ರವರು ರಿಟೈರ್ಡ್ ಪೊಲೀಸ್ ಆಫೀಸರ್ಸ್ ಅಸೋಸಿಯೇಷನ್ ನ ಉಪಾಧ್ಯಕ್ಷರಾಗಿ 10 ವರ್ಷ ಸೇವೆ ಸಲ್ಲಿಸಿದ್ದಾರೆ.ಮೈಸೂರು ಚಾಮರಾಜನಗರ ಜಿಲ್ಲೆ ಪೊಲೀಸ್ ಸಹಕಾರ ಸಂಘದ ನಿರ್ದೇಶಕರಾಗಿ 15 ವರ್ಷ ಜವಾಬ್ದಾರಿ ನಿರ್ವಹಿಸಿದ್ದಾರೆ.ಇದೀಗ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಕಾರ್ಯಾಚರಣೆ ಸಮಿತಿಯ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿದ್ದು ಹೊಸ ಜವಾಬ್ದಾರಿಯನ್ನ ಹೊತ್ತಿದ್ದಾರೆ.ಮೈಸೂರು ಜಿಲ್ಲೆ,ಮಡಿಕೇರಿ,ಮಂಡ್ಯ,ಚಾಮರಾಜನಗರ,ಹಾಸನ.ಮಂಗಳೂರು ಜಿಲ್ಲೆಗಳು ಇವರ ವ್ಯಾಪ್ತಿಗೆ ಬರಲಿದೆ.ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಸಾಕಷ್ಟು ಕಾಳಜಿ ವಹಿಸಿರುವ ಗುರುಸ್ವಾಮಿ ರವರ ಸೇವೆ ಸಾರ್ವಜನಿಕರ ಉಪಯೋಗಕ್ಕೆ ನೆರವಾಗಲೆಂಬುದು Tv10 ಕನ್ನಡ ವಾಹಿನಿಯ ಉದ್ದೇಶ…