
ಆಟೋ ಮಾರಾಟ ವಿಚಾರದಲ್ಲಿ ಕಿರಿಕ್…ಜಗಳ ಬಿಡಿಸಲು ಬಂದ ವ್ಯಕ್ತಿಗೆ ಡ್ರಾಗರ್ ನಿಂದ ಇರಿತ…ಯುಗಾದಿ ಹಬ್ಬದ ದಿನ ಘಟನೆ…
- TV10 Kannada Exclusive
- April 1, 2025
- No Comment
- 149
ಮೈಸೂರು,ಏ1,Tv10 ಕನ್ನಡ
ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ನಡೆಯುತ್ತಿದ್ದ ಗಲಾಟೆ ಬಿಡಿಸಲು ಹೋದ ವ್ಯಕ್ತಿ ಮೇಲೆ ಡ್ರಾಗರ್ ನಿಂದ ಇರಿದ ಘಟನೆ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಉಮೇಶ್ ಎಂಬುವರು ಡ್ರಾಗರ್ ನಿಂದ ಇರಿತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆಗೆ ಸಂಭಂಧಿಸಿದಂತೆ ಅರ್ಜುನ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.ಇನ್ನೂ ಇಬ್ಬರು ಆರೋಪಿಗಳ ಸೆರೆಗೆ ಜಾಲ ಬೀಸಿದ್ದಾರೆ.
ಯುಗಾದಿ ಹಬ್ಬದ ದಿನದಂದು ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವಾಗತ್ ಬಾರ್ ಬಳಿ ಜೂಜಾಟ ಆರಂಭಿಸಲು ಸಿದ್ದತೆ ಆಗಿತ್ತು.ಈ ವೇಳೆ ಎರಡು ಯುವಕರ ನಡುವೆ ಆಟೋ ಮಾರಾಟದಿಂದ ಬಂದ ಹಣದ ಬಗ್ಗೆ ಕಿರೀಕ್ ಶುರುವಾಗಿ ಜಗಳ ನಡೆಯುತ್ತಿತ್ತು.ಈ ವೇಳೆ ಅಲ್ಲಿಗೆ ಬಂದ ಉಮೇಶ್ ಜಗಳ ಬಿಡಿಸಲು ಉತ್ನಿಸಿದಾಗ ಯುವಕರು ಡ್ರಾಗರ್ ನಿಂದ ಉಮೇಶ್ ಕುತ್ತಿಗೆಗೆ ಇರಿದಿದ್ದಾರೆ.ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಉಮೇಶ್ ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆಗೆ ಸಂಭಂಧಿಸಿದಂತೆ ರವಿ,ಗರೀಶ್ ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲಾಗಿತ್ತು.ಇದೀಗ ಪೊಲೀಸರು ಅರ್ಜುನ್ ಎಂಬಾತನನ್ನ ಬಂಧಿಸಿದ್ದಾರೆ…