
ಸೇವೆಯಿಂದ ನಿವೃತ್ತಿಯಾದ ಗರುಡಾ ವಾಹನ…ದೇವರಾಜ ಪೊಲೀಸ್ ಠಾಣೆಯಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ…
- TV10 Kannada Exclusive
- April 1, 2025
- No Comment
- 274
ಮೈಸೂರು,ಏ1,Tv10 ಕನ್ನಡ
ಸೇವೆಯಿಂದ ನಿವೃತ್ತಿಗೊಂಡ ಗರುಡ ವಾಹನಕ್ಕೆ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಡಲಾಗಿದೆ. ದೇವರಾಜ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳು ಗರುಡಾ ವಾಹನಕ್ಕೆ ಸೆಂಡ್ ಆಫ್ ಮಾಡಿ ಸೇವೆಯ ದಿನಗಳನ್ನ ಸ್ಮರಿಸಿದ್ದಾರೆ.15 ವರ್ಷಗಳ ಕಾಲ ಸೇವೆ ಸಲ್ಲಿಸಿದ ವಾಹನಕ್ಕೆ
ಪೊಲೀಸ್ ನಿರೀಕ್ಷಕರಾದ K.R.ರಘು , ಪಿಎಸ್ಐ ಗಳಾದ ಜೈಕೀರ್ತಿ, ಪ್ರಭು ಮತ್ತು ಇತರೆ ಸಿಬ್ಬಂದಿಗಳು ಹಾಜರಿದ್ದು ಆತ್ಮೀಯವಾಗಿ ಬೀಳ್ಕೊಟ್ಟಿದ್ದಾರೆ.ವಿವಿದ ಠಾಣೆಗಳಲ್ಲಿ ಸೇವೆ ಸಲ್ಲಿಸಿದ 39 ಗರುಡಾ ವಾಹನಗಳು ಸೇವೆಯಿಂದ ನಿವೃತ್ತಿಯಾಗಲಿವೆ.ಮುಂದಿನ ದಿನಗಳಲ್ಲಿ ಹೊಸ ಗರುಡಾ ವಾಹನಗಳು ಸೇವೆಗೆ ಬರಲಿವೆ…