ಮೊದಲ ಪತ್ನಿ ಇದ್ದರೂ ಎರಡನೇ ಮದುವೆ ಮಾಡಿಕೊಂಡು ವಂಚನೆ…50 ಲಕ್ಷಕ್ಕೆ ಉಂಡೆನಾಮ…ಉಂಡೂಹೋದ ಕೊಂಡೂಹೋದ…

ಮೊದಲ ಪತ್ನಿ ಇದ್ದರೂ ಎರಡನೇ ಮದುವೆ ಮಾಡಿಕೊಂಡು ವಂಚನೆ…50 ಲಕ್ಷಕ್ಕೆ ಉಂಡೆನಾಮ…ಉಂಡೂಹೋದ ಕೊಂಡೂಹೋದ…

ಮೈಸೂರು,ಏ4,Tv10 ಕನ್ನಡ

ಮೊದಲ ಪತ್ನಿ ಇದ್ದರೂ ವಿಚ್ಛೇದನ ನೀಡಿರುವುದಾಗಿ ಫೇಕ್ ಡಾಕ್ಯುಮೆಂಟ್ ಕ್ರಿಯೇಟ್ ಮಾಡಿ ಎರಡನೇ ಮದುವೆಯಾಗಿ ಪತ್ನಿಗೆ 50 ಲಕ್ಷ ರೂ ವಂಚಿಸಿದ ಭೂಪ ಪರಾರಿಯಾದ ಘಟನೆ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವಂಚನೆಗೆ ಒಳಗಾದ ಪತ್ನಿ ರೋಜಾ ಎಂಬುವರು ಪ್ರಕರಣ ದಾಖಲಿಸಿದ್ದಾರೆ.ವಂಚಿಸಿದ ಖದೀಮ ಶರತ್ ರಾಮ್ ಇದೀಗ ತಲೆಮರೆಸಿಕೊಂಡಿದ್ದಾನೆ.

ಕುವೆಂಪುನಗರದಲ್ಲಿ ಲೇಡೀಸ್ ಪಿಜಿ ನಡೆಸುತ್ತಿರುವ ರೋಜಾ ಮೊದಲ ಪತಿಯಿಂದ ಕಾರಣಾಂತರದಿಂದ ವಿಚ್ಛೇದನ ಪಡೆದಿದ್ದಾರೆ.ಮಗನಿಗೆ ಆಸರೆಗಾಗಿ ಎರಡನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿ ಡೈವೋರ್ಸ್ ಮ್ಯಾಟ್ರಿಮೋನಿ ಆಪ್ ಮೂಲಕ ಯತ್ನಿಸಿದ್ದಾರೆ.ಆಗ ಕೇರಳಾ ರಾಜ್ಯದ ತ್ರಿಶೂರ್ ನ ಶರತ್ ರಾಮ್ ಪರಿಚಯವಾಗಿ ಮದುವೆ ಮಾಡಿಕೊಳ್ಳಲು ಒಪ್ಪಿದ್ದಾನೆ.ಅದ್ದೂರಿ ಮದುವೆ ಬದಲು ರಿಜಿಸ್ಟರ್ ಮದುವೆ ಮಾಡಿಕೊಳ್ಳಲು ಇಬ್ಬರೂ ಒಪ್ಪಿದ್ದಾರೆ.ಈ ವೇಳೆ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿರುವುದಾಗಿ ಶರತ್ ರಾಮ್ ನ್ಯಾಯಾಲಯದ ಆದೇಶದ ಕೊಟ್ಟಿದ್ದಾನೆ.ಇದನ್ನ ನಂಬಿದ ರೋಜಾ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಲ್ಲದೆ ಆತ್ನ ಜೊತೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾರೆ.ಮದುವೆ ವಿಚಾರ ಬಂದಾಗೆಲ್ಲ ಸಬೂಬುಗಳನ್ನ ಹೇಳಿಕೊಂಡು ಮುಂದಕ್ಕೆ ಹಾಕಿದ್ದಾನೆ.2022 ರಲ್ಲಿ ಪರಿಚಯವಾದ ನಂತರ ಶರತ್ ರಾಮ್ ಹಂತಹಂತವಾಗಿ 50 ಲಕ್ಷ ಹಣ ಪಡೆದಿದ್ದಾನೆ.ನಂತರ ಪಿಜಿ ಯಿಂದ ಬಂದ ಹಣಕ್ಕೂ ಪೀಡಿಸಿದ್ದಾನೆ.ಜೊತೆಗೆ ರೋಜಾ ಹೆಸರಲ್ಲಿ ಎರಡು ಕಂಪನಿಗಳನ್ನ ಆರಂಭಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸಿದ್ದಾನೆ.ಈತನ ವರ್ತನೆಯಿಂದ ಅನುಮಾನಗೊಂಡ ರೋಜಾ ಪರಿಶೀಲನೆ ನಡೆಸಿದಾಗ ವಿಚ್ಛೇದನ ಕಾಪಿ ಫೇಕ್ ಆಗಿರುವುದು ಖಚಿತವಾಗಿದೆ.ಅಲ್ಲದೆ ಕೇರಳಾದಲ್ಲಿ ವಾಸವಿರುವ ಮೊದಲ ಪತ್ನಿ ಜೊತೆ ಇನ್ನೂ ಸಂಪರ್ಕದಲ್ಲಿರುವುದು ಸಹ ಖಚಿತವಾಗಿದೆ.ಈ ಬಗ್ಗೆ ಪ್ರಶ್ನಿಸಿದಾಗ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆಂದು ರೋಜಾ ಪ್ರಕರಣದಲ್ಲಿ ದಾಖಲಿಸಿದ್ದಾರೆ.ಈಗಾಗಲೇ ಈತನ ವಿರುದ್ದ ಹಲವಾರು ವಂಚನೆ ಪ್ರಕರಣಗಳಿರುವುದು ಸಹ ಬೆಳಕಿಗೆ ಬಂದಿರುವುದಾಗಿ ರೋಜಾ ಆರೋಪಿಸಿದ್ದಾರೆ.ಶರತ್ ರಾಮ್ ವಿರುದ್ದ ಪ್ರಕರಣ ದಾಖಲಿಸಿರುವ ರೋಜಾ ಇದೀಗ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *