
ನಕಲಿ ದಾಖಲೆ ಸೃಷ್ಟಿಸಿ 26 ಲಕ್ಷ ಸಾಲ…ಕರ್ನಾಟಕ ಬ್ಯಾಂಕ್ ಗೆ 26 ಲಕ್ಷ ಪಂಗನಾಮ…ದಂಪತಿ ವಿರುದ್ದ FIR ದಾಖಲು…
- TV10 Kannada Exclusive
- April 7, 2025
- No Comment
- 178
ಮೈಸೂರು,ಏ7,Tv10 ಕನ್ನಡ
ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಕರ್ನಾಟಕ ಬ್ಯಾಂಕ್ ಗೆ ದಂಪತಿ 26 ಲಕ್ಷ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.ಕಾನೂನು ಕ್ರಮ ಕೈಗೊಳ್ಳುವಂತೆ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಂಪತಿ ವಿರುದ್ದ FIR ದಾಖಲಿಸಿದ್ದಾರೆ.
ಮೀನಾಕ್ಷಿ ಹಾಗೂ ಗಣೇಶ್ ಬಾಬು ಎಂಬುವರ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.2019 ರಲ್ಲಿ ಮೈಸೂರಿನ ಸರಸ್ವತಿಪುರಂ ನಲ್ಲಿರುವ ಕರ್ನಾಟಕ ಬ್ಯಾಂಕ್ ನಲ್ಲಿ ವ್ಯಾಪಾರದ ಉದ್ದೇಶಕ್ಕಾಗಿ ಗಣೇಶ್ ಬಾಬು ರವರ ಪತ್ನಿ ಮೀನಾಕ್ಷಿ ಹೆಸರಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಲಾಗಿದೆ.ಸಾಲಕ್ಕಾಗಿ ಬೋಗಾದಿಯ ರಾಜರಾಜೇಶ್ವರಿ ನಗರ ಬಡಾವಣೆಯ ನಿವೇಶನ ಸಂಖ್ಯೆ 28/ಬಿ ಗೆ ಸಂಭಂಧಿಸಿದ ದಾಖಲೆ ನೀಡಿದ್ದಾರೆ.26 ಲಕ್ಷ ಸಾಲ ಮಂಜೂರಾಗಿ ಮೀನಾಕ್ಷಿ ರವರ ಖಾತೆಗೆ ವರ್ಗಾವಣೆ ಆಗಿದೆ.ನಂತರ ಸಾಲ ಮರುಪಾವತಿಸುವಲ್ಲಿ ಮೀನಾಕ್ಷಿ ವಿಫಲವಾಗಿದ್ದಾರೆ.ನಿವೇಶನ ಹರಾಜು ಹಾಕಲು ಮುಂದಾದಾಗ ನಕಲಿ ದಾಖಲೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.ಸಧ್ಯ ದಂಪತಿ ವಿರುದ್ದ ಪ್ರಕರಣ ದಾಖಲಾಗಿದೆ…