
ಯುವತಿಯನ್ನ ಹಿಂಬಾಲಿಸಿ ಟಾರ್ಚರ್…ಯುವಕನ ವಿರುದ್ದ ಎಫ್.ಐ.ಆರ್…
- TV10 Kannada Exclusive
- April 7, 2025
- No Comment
- 64
ಮೈಸೂರು,ಏ7,Tv10 ಕನ್ನಡ
ಯುವತಿಯನ್ನ ಹಿಂಬಾಲಿಸಿ ಟಾರ್ಚರ್ ನೀಡುತ್ತಿರುವ ಯುವಕನ ವಿರುದ್ದ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅರುಣ ಎಂಬಾತನ ವಿರುದ್ದ ಎಫ್.ಐ.ಆರ್.ದಾಖಲಾಗಿದೆ.ಶ್ರೀರಾಂಪುರ ಯುವತಿಯ ಹಿಂದೆ ಬಿದ್ದಿರುವ ಅರುಣ ಪದೇ ಪದೇ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾನೆ.ಈ ಹಿಂದೆ ಈತನ ವಿರುದ್ದ ಇದೇ ಆರೋಪದ ಹಿನ್ನಲೆ ಪ್ರಕರಣ ದಾಖಲಾಗಿದ್ದರೂ ಬುದ್ದಿಕಲಿಯದ ಅರುಣ ಮತ್ತೆ ಹಿಂಬಾಲಿಸಿ ಟಾರ್ಚರ್ ನೀಡುತ್ತಿದ್ದಾನೆಂದು ಆರೋಪಿಸಿ ಯುವತಿಯ ಮನೆಯವರು ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…