
ಕಾವೇರಿ ನೀರಾವರಿ ನಿಗಮ ಇ.ಇ.ಮತ್ತು ಅಕೌಂಟ್ ಸೂಪರಿಡೆಂಟ್ ಲೋಕಾಬಲೆಗೆ…ನಂಜನಗೂಡು ಕಚೇರಿಯಲ್ಲೇ ಲಂಚ ಸ್ವೀಕಾರ ವೇಳೆ ದಾಳಿ…
- TV10 Kannada Exclusive
- April 7, 2025
- No Comment
- 67
ನಂಜನಗೂಡು,ಏ7,Tv10 ಕನ್ನಡ
ಕಾಮಗಾರಿ ಬಿಲ್ ಪಾಸ್ ಮಾಡಲು ಲಂಚ ಪಡೆಯುತ್ತಿದ್ದ
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರು ಕಾವೇರಿ ರಂಗನಾಥ್ ಹಾಗೂ
ಅಕೌಂಟ್ ಸೂಪರಿಡೆಂಟ್ ಉಮಾಮಹೇಶ್ ಲೋಕಾ ಬಲೆಗೆ ಸಿಲುಕಿದ್ದಾರೆ.
ಟೆಂಡರ್ ಹಣ ಬಿಡುಗಡೆಗೆ ಡಿಮ್ಯಾಂಡ್ ಮಾಡಿ ಹಣ ಸ್ವೀಕಾರ ಮಾಡುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಚಾಮರಾಜನಗರ ನಿವಾಸಿ ಅಬ್ದುಲ್ ಅಜೀಜ್ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
2022 ರಲ್ಲಿ ನಾಲೆ ರಿಪೇರಿಗೆ ಟೆಂಡರ್ ಕರೆಯಲಾಗಿತ್ತು.
23 ಲಕ್ಷದ 10 ಸಾವಿರ ರೂ.ಗೆ ಕಾಮಗಾರಿ.
ಕಾಮಗಾರಿಯ ಹಣ ಬಿಡುಗಡೆಗೆ ಶೇ.6ರಷ್ಟು ಬೇಡಿಕೆ ಇಟ್ಟಿದ್ದರು.
1 ಲಕ್ಷದ 45 ಸಾವಿರ ರೂಗೆ ಡಿಮ್ಯಾಂಡ್ ಮಾಡಿದ್ದರು.
ಕಾಮಗಾರಿ ಹಣ ಪಡೆಯಲು ಬಂದಾಗ ಶೇ.10ರಷ್ಟು ಏರಿಕೆ ಮಾಡಿದ್ದರಿಂದ ಬೇಸತ್ತ ಅಜೀಜ್ ಲೋಕಾಗೆ ದೂರು ನೀಡಿದ್ದರು.
ಲೋಕಾ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ನೇತೃತ್ವದಲ್ಲಿ ದಾಳಿ ನಡೆಸಿದ್ದು
ಹಣ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇನ್ಸ್ಪೆಕ್ಟರ್‌ಗಳಾದ ರವಿಕುಮಾರ್, ಶಶಿಕುಮಾರ್ ದಾಳಿಯಲ್ಲಿ ಭಾಗಿಯಾಗಿದ್ದಾರೆ.
ಲೋಕಾ ಎಸ್ಪಿ ಉದೇಶ್ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆದಿದೆ…