
ಜೋಳ ಹಾಕುವ ವಿಚಾರದಲ್ಲಿ ಹೊಡಿಬಡಿ…ಚಾಕುವಿನಿಂದ ಇರಿತ…5 ಮಂದಿ ವಿರುದ್ದ FIR…
- TV10 Kannada Exclusive
- April 11, 2025
- No Comment
- 89

ಹುಣಸೂರು,ಏ11,
ಜೋಳು ಬಿಡುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದ ಘಟನೆ ಹುಣಸೂರು ತಾಲೂಕು ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.ಈ ವೇಳೆ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿದೆ.ಘಟನೆ ಸಂಭಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 5 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.
ಮಹೇಶ್ ಎಂಬುವರಿಗೆ ಚಾಕುವಿನಿಂದ ಇರಿಯಲಾಗಿದೆ.ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಮಹೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.ಹರಳಹಳ್ಳಿ ಗ್ರಾಮ ಸರ್ವೆ ನಂ.12 ರ 5 ಎಕ್ರೆ ಜಮೀನಿನಲ್ಲಿ ಮಹೇಶ್ ರವರು ಜೋಳ ಹಾಕಲು ಉಳುಮೆ ಮಾಡಿ ಸಿದ್ದತೆ ಮಾಡಿಕೊಂಡಿದ್ದರು.ಈ ವೇಳೆ ಭೈರೇಗೌಡ,ತೇಜಸ್ವಿನಿ,ರಂಜಿತ್,ರೇಣುಕಾ ಹಾಗೂ ಪುಟ್ಟಲಕ್ಷಮ್ಮ ರವರು ಜಮೀನಿಗೆ ಬಂದು ಜೋಳ ಹಾಕಿದ್ದಾರೆ.ಇದನ್ನ ಪ್ರಶ್ನಿಸಿದಾಗ ಜಗಳ ಶುರುವಾಗಿ ಹೊಡೆದಾಟಕ್ಕೆ ನಾಂದಿಯಾಗಿದೆ.ಈ ವೇಳೆ ರಂಜಿತ್ ಚಾಕುವಿನಿಂದ ಮಹೇಶ್ ಗೆ ಇರಿದಿದ್ದಾನೆ.ಬಿಡಿಸಲು ಬಂದ ಮಹೇಶ್ ಪತ್ನಿ ಪದ್ಮ,ಮಕ್ಕಳಾದ ದಿವ್ಯ,ಕಾವ್ಯ,ಅಕ್ಕ ಛಾಯ ರವರ ಮೇಲೂ ಹಲ್ಲೆ ನಡೆಸಿದ್ದಾರೆ.ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ ಚಾಕುವಿನಿಂದ ಇರಿದು ಕೊಲೆ ಬೆದರಿಕೆ ಹಾಕಿದ ಭೇರೇಗೌಡ,ತೇಜಸ್ವಿನಿ,ರಂಜಿತ್,ರೇಣುಕಾ,ಪುಟ್ಟಲಕ್ಷಮ್ಮ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮಹೇಶ್ FIR ದಾಖಲಿಸಿದ್ದಾರೆ…