
ಪೊಲೀಸ್ ಪೇದೆ ಮೇಲೆ ಹಲ್ಲೆ…ಕಾರ್ ನಿಲ್ಲಿಸಬೇಡ ತೆಗಿ ಎಂದಿದ್ದೇ ತಪ್ಪಾಯ್ತು…ಯುವಕನ ವಿರುದ್ದ FIR…
- TV10 Kannada Exclusive
- April 14, 2025
- No Comment
- 195
ಮೈಸೂರು,ಏ14,
ಕಾರನ್ನ ನಿಲ್ಲಿಸಬೇಡ ತೆಗಿ ಎಂದು ಹೇಳಿದ ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ ಘಟನೆ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ನಡೆದಿದೆ.ದೇವರಾಜ ಪೊಲೀಸ್ ಠಾಣೆ ಪೇದೆ ಪುಟ್ಟರಾಜು ಎಂಬುವರು ಹಲ್ಲೆಗೊಳಗಾದವರು.ಕೆ.ಸಿ.ಲೇಔಟ್ ನ ನಿವಾಸಿ ಪ್ರೀತಂ ಹಲ್ಲೆ ನಡೆಸಿದ ಯುವಕ.ನಿನ್ನೆ ತಡರಾತ್ರಿ ಜಯಮಾರ್ತಾಂಡ ಗೇಟ್ ಬಳಿ ಪ್ರೀತಂ ಕಾರನ್ನ ನಿಲ್ಲಿಸಿದ್ದ.ತಡರಾತ್ರಿ ಆದ್ರೂ ನಿಲ್ಲಿಸಿದ ಬಗ್ಗೆ ಪ್ರಶ್ನಿಸಿದ ನೈಟ್ ಬೀಟ್ ನಲ್ಲಿದ್ದ ಪುಟ್ಟರಾಜು ಕಾರನ್ನ ತೆಗೆಯುವಂತೆ ತಿಳಿಸಿದ್ದಾರೆ.ಇಷ್ಟಕ್ಕೇ ಮಾತಿನ ಚಕಮಕಿ ನಡೆಸಿದ ಪ್ರೀತಂ ಏಕಾಏಕಿ ಹಲ್ಲೆ ನಡೆಸಿದ್ದಾನೆ.ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರೀತಂ ನ ವಶಕ್ಕೆ ಪಡೆದಿದ್ದಾರೆ.ಪ್ರೀತಂ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾರನ್ನ ಸೀಜ್ ಮಾಡಿದ್ದಾರೆ…