
ಎಲೆಕ್ಟ್ರಿಕ್ ಶಾಕ್…ಮೊದಲ ಮಹಡಿಯಿಂದ ಬಿದ್ದು ಬಾರ್ ಬೆಂಡರ್ ಸಾವು…
- TV10 Kannada Exclusive
- April 15, 2025
- No Comment
- 190
ಮೈಸೂರು,ಏ15,
ಬಾರ್ ಬೆಂಡಿಂಗ್ ಕೆಲಸ ಮಾಡುವಾಗ ಆಕಸ್ಮಿಕವಾಗಿ ವಿಧ್ಯುತ್ ಸಂಪರ್ಕವಾದ ಹಿನ್ನಲೆ ಮೊದಲ ಮಹಡಿಯಿಂದ ಬಿದ್ದು ಕಾರ್ಮಿಕ ಸಾವನ್ನಪ್ಪಿದ ಘಟನೆ ಮೈಸೂರಿನ ಕೆ.ಆರ್.ಮಿಲ್ ಕಾಲೋನಿಯಲ್ಲಿ ನಡೆದಿದೆ.ಟಿ.ನರಸೀಪುರ ನಿವಾಸಿ ರವಿ(35) ಮೃತ ದುರ್ದೈವಿ.ಹೊಸ ಮನೆ ಕಾಮಗಾರಿ ನಡೆಯುತ್ತಿದ್ದ ವೇಳೆ ಮೊದಲಮಹಡಿಯಲ್ಲಿ ಕೆಲಸ ಮಾಡುವಾಗ ಘಟನೆ ನಡೆದಿದೆ.ಕಬ್ಬಿಣದ ಬಾರ್ ಎತ್ತುವಾಗ ಆಕಸ್ಮಿಕವಾಗಿ ವಿದ್ಯುತ್ ಸಂಪರ್ಕವಾಗಿದೆ.ಶಾಕ್ ನಿಂದಾಗಿ ರವಿ ಮೊದಲ ಮಹಡಿಯಿಂದ ಬಿದ್ದಿದ್ದಾನೆಂದು ಹೇಳಲಾಗಿದೆ.ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…