
ಮರಗಳ ಮಾರಣಹೋಮ ವಿಚಾರ…ಪುಟಾಣಿಗಳಿಂದ ಪ್ರತಿಭಟನೆ…
- TV10 Kannada Exclusive
- April 15, 2025
- No Comment
- 155
ಮೈಸೂರು,ಏ15,
ಮೈಸೂರಿನಲ್ಲಿ ರಸ್ತೆ ಅಗಲಿಕರಣಕ್ಕೆ ಮರಗಳ ಮಾರಣಹೋಮ ನಡೆಸಿದ ಹಿನ್ನಲೆ
ಪುಟಾಣಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಮರ ಕಡಿದ ಹಾಕಿದ ರಸ್ತೆಯಲ್ಲಿ ಮರ ಉಳಿಸಿ ಎಂಬ ಪ್ಲೇ ಕಾರ್ಡ್ ಹಿಡಿದು ಜಾಥ ಮಾಡಿದರು.
100 ಅಡಿ ರಸ್ತೆ ನಿರ್ಮಾಣಕ್ಕಾಗಿ ಮರ ಕಡಿಯಲಾಗಿತ್ತು.
ಅರಣ್ಯ ಇಲಾಖೆ ಅನುಮತಿ ಪಡೆದು ಮರ ಕತ್ತರಿಸಿದ್ದ ಪಾಲಿಕೆ.
ಎಸ್ ಪಿ ಕಚೇರಿಯಿಂದ ಹೈದರ್ ಅಲಿ ರಸ್ತೆಯ ಕಾಳಿಕಾಂಬ ದೇಗುಲದವರೆಗೂ ರಸ್ತೆ ನಿರ್ಮಾಣ ನಡೆಯಲಿದೆ.ಹೀಗಾಗಿ
40ಕ್ಕೂ ಹೆಚ್ಚು ಮರಗಳನ್ನ ಪಾಲಿಕೆ ತೆರವುಗೊಳಿಸಿದೆ.
ಪಾಲಿಕೆ ಹಾಗೂ ಅರಣ್ಯ ಇಲಾಖೆ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.ಇದೀಗ ಚಿಣ್ಣರು ಸಹ ತಮ್ಮ ವಿರೋಧವನ್ನ ವ್ಯಕ್ತಪಡಿಸುವ ಮೂಲಕ ಪರಿಸರ ಕಾಳಜಿ ಪ್ರದರ್ಶಿಸಿದರು…