
ಸಿಡಿಯಮ್ಮನ ಜಾತ್ರಾ ಮಹೋತ್ಸವ ಸಂಭ್ರಮ…ಸಂಸದ ಯದುವೀರ್ ಭಾಗಿ…ವಿಶೇಷ ಪೂಜೆ…
- TV10 Kannada Exclusive
- May 2, 2025
- No Comment
- 40

ಹುಣಸೂರು,ಮೇ2,Tv10 ಕನ್ನಡ

ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಸಿಡಿಯಮ್ಮನ ಜಾತ್ರಾ ಮಹೋತ್ಸವ ಅದ್ದೂರಿಯಿಂದ ನೆರವೇರಿತು.ಹಲವಾರು ಐತಿಹ್ಯವುಳ್ಳ, ರಾಜ್ಯಾದ್ಯಂತ ಭಕ್ತರನ್ನು ಹೊಂದಿರುವ, ಪವಾಡದ ಜಾತ್ರೆಯೆಂದೇ ಪ್ರತಿಬಿಂಬಿತವಾಗಿರುವ ಗ್ರಾಮದೇವತೆ ಜಾತ್ರಾ ಮಹೋತ್ಸವದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.ನಾಡಿನ ಒಳಿತಿಗಾಗಿ ಭಕ್ತಿಯಿಂದ ಪ್ರಾರ್ಥಿಸಿದರು. ಅನಾದಿಕಾಲದಿಂದಲೂ ಹಲವಾರು ಸಮುದಾಯಗಳು ಸೇರಿ ಕೆಲಸವನ್ನು ಹಂಚಿಕೊಂಡು ಅದ್ದೂರಿಯಾಗಿ ನೆರವೇರಿಸುವ ಈ ಜಾತ್ರೆ ಸರ್ವಜನಾಂಗದ ಜಾತ್ರೆ ಎಂದೇ ವಿಶೇಷವಾಗಿದೆ.ನಾಡಿನ ವಿವಿದ ಭಾಗಗಳಿಂದ ಆಗಮಿಸಿದ ಭಕ್ತರು ಜಾತ್ರೆಯನ್ನ ಕಣ್ತುಂಬಿಕೊಂಡರು…