
ಭಾರತ ಸೈನಿಕರ ಹೆಸರಿನಲ್ಲಿ ಹನುಮಾನ್ ಚಾಲಿಸ ಪಠಣೆ…ಬಿಜೆಪಿ ಕಾರ್ಯಕರ್ಯರಿಂದ ವಿಶೇಷ ಪೂಜೆ…
- TV10 Kannada Exclusive
- May 9, 2025
- No Comment
- 14
ಮೈಸೂರು,ಮೇ9,Tv10 ಕನ್ನಡ
ಪಾಕ್ ಉಗ್ರರ ಮೇಲೆ ಭಾರತದ ಸೈನಿಕರಿಂದ ಸಿಂಧೂರ್ ಆಪರೇಷನ್
ಯೋಧರ ಹೆಸರಿನಲ್ಲಿ ಮೈಸೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮೈಸೂರಿನ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು
ಕೋಟೆ ಆಂಜನೇಯ ದೇವಸ್ಥಾನದಲ್ಲಿ ಸೈನಿಕರ ಹೆಸರಿನಲ್ಲಿ ಪೂಜೆ ಸಲ್ಲಿಸಿ ಹನುಮಾನ್ ಚಾಲೀಸ ಪಠಣೆ ಮಾಡಿದರು.
ಪಾಕಿಸ್ತಾನದ ವಿರುದ್ಧ ಹೋರಾಡುತ್ತಿರುವ ಸೈನಿಕರಿಗೆ ಶಕ್ತಿ ತುಂಬಲು ಹನುಮಾನ್ ಚಾಲೀಸ ಪಠಣೆ ಮಾಡಿದರು.ನಂತರ
ಇಡುಗಾಯಿ ಹೊಡೆಯುವ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಯುದ್ಧದಲ್ಲಿ ದುಷ್ಟ ಶಕ್ತಿ ಸಂಹಾರ ಆಗಲಿ.
ಸೈನಿಕರಿಗೆ ರಾಮನ ಆಶೀರ್ವಾದ ಹನುಮನ ಶಕ್ತಿ ಸಿಗಲಿ ಎಂದು ಜೈಕಾರ ಕೂಗಿದರು.
ಯೋಧರ ಪರ ಜೈಕಾರ ಕೂಗುತ್ತಾ ದೇವಸ್ಥಾನದ ಬಳಿ ಹನುಮಾನ್ ಚಾಲೀಸ ಪಠಿಸಿದರು.
ಪೂಜೆಯಲ್ಲಿ ಸಂಸದ ಯದುವೀರ್, ಮಾಜಿ ಶಾಸಕ ಎಲ್ ನಾಗೇಂದ್ರ ಭಾಗಿಯಾಗಿದ್ದರು…