
ಮೖಸೂರಿನಲ್ಲಿ ಯುವಕನ ಕೊಲೆ…5 ಮಂದಿಯ ತಂಡದಿಂದ ಕೃತ್ಯ…ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ…
- CrimeTV10 Kannada Exclusive
- July 14, 2025
- No Comment
- 40
ಮೈಸೂರಿನಲ್ಲಿ ಯುವಕನ ಬರ್ಬರ ಕೊಲೆಯಾಗಿದೆ.
ವರುಣ ಗ್ರಾಮದ ಹೊರವಲಯದ ಹೋಟೆಲ್ ಬಳಿ ಕೃತ್ಯ ನಡೆದಿದೆ.ಕಾರ್ತಿಕ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಕಾರ್ತಿಕ್ ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ.ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
5 ಜನರ ತಂಡದಿಂದ ದುಷ್ಕೃತ್ಯ ನಡೆದಿದೆ.
ನೆನ್ನೆ ತಡರಾತ್ರಿ ನಡೆದಿರುವ ಕೊಲೆ.ಕೊಲೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊಲೆಯಾದ ಕಾರ್ತಿಕ್ ರೌಡಿ ಶೀಟರ್ ಎಂದು ಹೇಳಲಾಗಿದೆ…