ಮತ್ತೆ ಶುರುವಾಯ್ತು ಖಾಸಗಿ ಫೈನಾನ್ಸ್ ಗಳ ಹಾವಳಿ…ಮನೆಗೆ ಬೀಗ ಜಡಿಸ ಸಿಬ್ಬಂದಿ…ಮನೆ ಮಾಲೀಕರ ಪರ ನಿಂತ ರೈತ ಮುಖಂಡರು…
- TV10 Kannada Exclusive
- July 14, 2025
- No Comment
- 48
ನಂಜನಗೂಡು,ಮೇ8,Tv10 ಕನ್ನಡ
ಖಾಸಗಿ ಫೈನಾನ್ಸ್ ಗಳಿಗೆ ಸರ್ಕಾರ ಖಡಕ್ ವಾರ್ನಿಂಗ್ ನೀಡಿದ್ದರೂ ಲೆಕ್ಕಿಸದ ಸಿಬ್ಬಂದಿಗಳು ತಮ್ಮ ದರ್ಪ ಮುಂದುವರೆಸಿದ್ದಾರೆ.ನಂಜನಗೂಡಿನಲ್ಲಿ ಖಾಸಗಿ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಮತ್ತೆ ಚಾಲ್ತಿಗೆ ಬಂದಿದೆ.ವಾಸದ ಮನೆಗೆ ಬೀಗ ಹಾಕಿ ಮನೆ ಗೋಡೆಗಳ ಮೇಲೆ ಕಪ್ಪುಶಾಯಿಯಲ್ಲಿ ಬರೆದು ದರ್ಪ ಪ್ರದರ್ಶಿಸಿದ್ದಾರೆ. ಸೂರಳ್ಳಿ ಗ್ರಾಮದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಮಲ್ಲಿಗಮ್ಮ ಎಂಬುವರು. 30.11.2023 ರಂದು ವಾಸದ ಮನೆಯ ಪತ್ರಗಳನ್ನು ನೀಡಿ 5 ಲಕ್ಷ ರೂಗಳನ್ನು ಮೈಸೂರು ಮೂಲದ ಜನ ಸ್ಮೈಲ್ ಎಂಬ ಖಾಸಗಿ ಫೈನಾನ್ಸ್ ನಿಂದ ಸಾಲ ಪಡೆದುಕೊಂಡಿದ್ದರು.
ಸಾಲ ಮತ್ತು ಬಡ್ಡಿ ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್ ಸಿಬ್ಬಂದಿಗಳು ವಾಸದ ಮನೆಗೆ ಬೀಗ ಜಡಿದಿದ್ದಾರೆ. ಬೀಗ ಜಡಿದಿರುವ ಮನೆಗೆ ರೈತ ಸಂಘದ ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.ಅಲ್ಲದೆ ಖಾಸಗಿ ಫೈನಾನ್ಸ್ ಸಿಬ್ಬಂದಿಗಳ ವರ್ತನೆಯನ್ನ ಖಂಡಿಸಿದ್ದಾರೆ.ಕೂಡಲೆ ಮಲ್ಲಿಗಮ್ಮ ಗೆ ನ್ಯಾಯ ದೊರಕಿಸುವಂತೆ ಒತ್ತಾಯಿಸಿದ್ದಾರೆ…