
ಚಿರತೆದಾಳಿ…ಎರಡು ಕರುಗಳು ಬಲಿ…ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ…
- Crime
- May 14, 2025
- No Comment
- 35

ಮಂಡ್ಯ,ಮೇ13,Tv10 ಕನ್ನಡ
ಮಂಡ್ಯದಲ್ಲಿ ಚಿರತೆಗಳ ಹಾವಳಿ ಮುಂದುವರೆದಿದೆ
ಚಿರತೆ ದಾಳಿಗೆ ಎರಡು ಕರುಗಳು ಬಲಿಯಾಗಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಾಪನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.ವಾರದ ಹಿಂದೆ ಕಾಪನಹಳ್ಳಿಯ ಗವಿಮಠದ ಸಮೀಪ ಕಾಣಿಸಿಕೊಂಡಿದ್ದ ಚಿರತೆ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿತ್ತು.
ಸುತ್ತಮುತ್ತ ಗ್ರಾಮಗಳ ಜಾನುವಾರುಗಳ ಮೇಲೆ ದಾಳಿ ಚಿರತೆ ಮಾಡುತ್ತಿದೆ.
ಇದೀಗ ಗವಿಮಠದ ಆವರಣದಲ್ಲಿ ಕಟ್ಟಿದ್ದ ಕರುಗಳ ಮೇಲೆ ಚಿರತೆ ದಾಳಿ ಮಾಡಿದೆ.ದೂರು ನೀಡಿದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಚಿರತೆ ಸೆರೆಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ…