
ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ…ಅಡ್ಡೆ ಮೇಲೆ ಪೊಲೀಸರ ದಾಳಿ…ನಾಲ್ವರು ಮಹಿಳೆಯರ ರಕ್ಷಣೆ…
- Crime
- May 17, 2025
- No Comment
- 306

ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ…ಅಡ್ಡೆ ಮೇಲೆ ಪೊಲೀಸರ ದಾಳಿ…ನಾಲ್ವರು ಮಹಿಳೆಯರ ರಕ್ಷಣೆ…



ಮಂಡ್ಯ,ಮೇ17,Tv10 ಕನ್ನಡ
ಸ್ಪಾ ಹೆಸರಲ್ಲಿ ವೇಶ್ಯಾವಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಮಂಡ್ಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರು ಮಹಿಳೆಯರನ್ನ ರಕ್ಷಿಸಿದ್ದಾರೆ.ಸ್ಪಾ ನಡೆಸುತ್ತಿದ್ದ ಮಹಿಳೆ ಹಾಗೂ ಓರ್ವ ಪಿಂಪ್ ನ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಮಂಡ್ಯ ನಗರದ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯ
ಪ್ರತಿಷ್ಠಿತ ಕಾಲೇಜು ಪಕ್ಕದಲ್ಲೇ ದಂಧೆ ನಡೆಯುತ್ತಿತ್ತು.
ಸಲೂನ್ ಅಂಡ್ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿತ್ತು.ಕ್ಲೌಡ್ 11 ಹೆಸರಿನ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ಹಿಂದೆಯೂ ಇದೇ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿದ್ದರು.
ಹಲವು ವರ್ಷಗಳಿಂದ ಇದೇ ದಂಧೆಯಲ್ಲಿ ತೊಡಗಿರುವ ಸಲೂನ್ ಮಾಲಕಿ ರಾಣಿ ಎಂಬಾಕೆ ವಿರುದ್ಧ ಈ ಹಿಂದೆ ಮೈಸೂರು, ಮಂಡ್ಯದಲ್ಲೂ ಪ್ರಕರಣ ದಾಖಲಾಗಿತ್ತು.
ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್, ಸಿಪಿಐ ನವೀನ್ ಸುಪ್ಪೇಕರ್ ನೇತೃತ್ವದಲ್ಲಿ ದಾಳಿ ನಡೆದಿದೆ.ಒಮ್ಮೆ ಸೀಜ್ ಆಗಿದ್ದರೂ ಮತ್ತೆ ದಂಧೆ ನಡೆಸಲು ಅವಕಾಶ ನೀಡಿದ ಆರೋಪ ಕೇಳಿಬಂದಿದೆ.
ಕಟ್ಟಡ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಒಡನಾಡಿ ಸಂಸ್ಥೆ ಆಗ್ರಹಿಸಿದೆ.ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ದಂಧೆ ನಡೆಸುತ್ತಿದ್ದ ಆರೋಪವೂ ಇದೆ.
ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…