
ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಓಋವ ವ್ಯಕ್ತಿ,ಎರಡು ಹಸು ಸಾವು…
- Crime
- May 26, 2025
- No Comment
- 38
ನಂಜನಗೂಡು,ಮೇ26,Tv10 ಕನ್ನಡ
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಓರ್ವ ವ್ಯಕ್ತಿ, ಎರಡು ಹಸು ಸಾವನ್ನಪ್ಪಿದ ಘಟನೆ
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಏಚಗಳ್ಳಿ ಗ್ರಾಮದಲ್ಲಿ ನಡೆದಿದೆ.
ಸಿದ್ದರಾಜು (52) ಮೃತ ದುರ್ದೈವಿ.ಜಮೀನಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ವೇಳೆ ಘಟನೆ ನಡೆದಿದೆ.
ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಮೊದಲು
ಮೇಯುತ್ತಿದ ಹಸುಗಳಿಗೆ ತಗುಲಿದೆ.ಹಸುಗಳನ್ನ ರಕ್ಷಿಸಲು ಹೋದ ಸಿದ್ದರಾಜುಗು ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾರೆ.
ಸಂಜೆಯಾದರೂ ಸಿದ್ದರಾಜು ಮನೆಗೆ ಬಾರದ ಹಿನ್ನೆಲೆ
ಕುಟುಂಬ ಸದಸ್ಯರು ಜಮೀನಿಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು, ವಿದ್ಯುತ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…