
ಕೆರೆ ಅಂಚಿನಲ್ಲಿ ಪೀಸ್ ಪೀಸ್ ಆದ ಪುರುಷ ಶವ ಪತ್ತೆ…ಕೊಲೆ ಶಂಕೆ…
- TV10 Kannada Exclusive
- May 25, 2025
- No Comment
- 30
ಮೈಸೂರು,ಮೇ25,Tv10 ಕನ್ನಡ
ಕೆರೆ ಅಂಚಿನಲ್ಲಿ ಪೀಸ್ ಪೀಸ್ ಆದ ಪುರುಷ ಶವ ಪತ್ತೆಯಾದ ಘಟನೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಹೆಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.ತಲೆ,ಎಡ ಮುಂಗೈ,ತೊಡೆ,ಮೊಣಕಾಲು ಬೇರ್ಪಡಿಸಲಾಗಿದ್ದು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ.ಕೊಲೆ ಮಾಡಿ ಶವ ತಂದು ಹಾಕಿರಬಹುದೆಂದು ಶಂಕಿಸಲಾಗಿದೆ.ಮೃತನ ಮಾಹಿತಿ ತಿಳಿದು ಬಂದಿಲ್ಲ.ಸ್ಥಳಕ್ಕೆ ಜಯಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ…