
ವಿಧ್ಯಾರ್ಥಿನಿ ಡೆತ್ ನೋಟ್ ಬರೆದು ಆತ್ಮ*ತ್ಯೆ…
- Crime
- May 29, 2025
- No Comment
- 36
ಕೊಡಗು,ಮೇ29,Tv10 ಕನ್ನಡ
ಡೆತ್ ನೋಟ್ ಬರೆದಿಟ್ಟು ವಿಧ್ಯಾರ್ಥಿನಿ ಆತ್ಮತ್ಯೆಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಸಿಇಟಿ ಹಾಸ್ಟೆಲ್ ನಲ್ಲಿ ನಡೆದಿದೆ. ರಾಯಚೂರು ಮೂಲದ ಪ್ರಥಮ ವರ್ಷದ ಎ.ಐ.ಎಂ.ಎಲ್ ವ್ಯಾಸಂಗ ಮಾಡುತ್ತಿರುವ ತೇಜಸ್ವಿನಿ(19) ಮೃತ ದುರ್ದೈವಿ. ಪೊನ್ನ ಪೇಟೆ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿದಾಗ ಡೆತ್ ನೋಟ್ ಪತ್ತೆಯಾಗಿದೆ. ಆರು ಸಬ್ಜೆಕ್ಟ್ ಬ್ಯಾಕ್ ಲಾಗ್ ಇರುವ ಕಾರಣ,ತನಗೆ ಮುಂದೆ ಓದಲು ಇಷ್ಟವಿಲ್ಲದೆ ಆತ್ಮತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾಳೆ.
ರಾಯಚೂರಿನ ಮಹಾಂತಪ್ಪ ಎಂಬುವರ ಏಕೈಕ ಪುತ್ರಿಯಾಗಿರುವ ತೇಜಸ್ವಿನಿ.ಮೂರು ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ತೇಜಸ್ವಿನಿ ಕಾರ್ಯಕ್ರಮಕ್ಕೆ ಬಾರದವರಿಗೂ ಹುಟ್ಟು ಹಬ್ಬದ ಅಂಗವಾಗಿ ಸ್ನೇಹಿತರಿಗೆ ಸಿಹಿ ಹಂಚಿದ್ದಾಳೆ.
ತರಗತಿಗೆ ಆಗಮಿಸಿದ ನಂತರ ನಿನ್ನೆ ಸಂಜೆ 4 ಗಂಟೆಗೆ ಹಾಸ್ಟೆಲ್ನಲ್ಲಿ ನೇಣು ಬಿಗಿದುಕೊಂಡಿದ್ದಾಳೆ.
ಆಕೆಯ ಸಹಪಾಠಿ ಕೊಠಡಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ…