
ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಗ್ರಾಮದ ಬಸವ ಬಲಿ…ಇಂದು ಅಂತ್ಯ ಸಂಸ್ಕಾರ…ಸ್ಮರಣಾರ್ಥ ನಿರ್ಮಿಸುವಂತೆ ಗ್ರಾಮಸ್ಥರ ಆಗ್ರಹ…
- Crime
- June 7, 2025
- No Comment
- 123

ಮೈಸೂರು,ಜೂ7,Tv10 ಕನ್ನಡ
ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಗ್ರಾಮದ ಬಸವ ಬಲಿಯಾಗಿದೆ. 5 ತಿಂಗಳ ಹಿಂದೆ ಕಿಡಿಗೇಡಿಗಳ ಮಚ್ಚಿನ ಏಟಿನಿಂದ ಗಾಯಗೊಂಡಿದ್ದ ಹಸು ನರಳಿ ಸಾವುನ್ನಪ್ಪಿದೆ.ಗ್ರಾಮಸ್ಥರು ಮೆರವಣಿಗೆ ನಡೆಸಿ ಇಂದು ಅಂತ್ಯ ಸಂಸ್ಕಾರ ಮಾಡಿದ್ದಾರೆ.ಸಮಾಧಿ ಮೇಲೆ ಗೋಪುರ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.
ಐದು ತಿಂಗಳ ಹಿಂದೆ ಹಸುವಿನ ಮೇಲೆ ಮಚ್ಚಿನಿಂದ ಕಿಡಿಗೇಡಿಗಳು ಹಲ್ಲೆ ನಡೆಸಿದ್ದರು.
ಮೈಸೂರು ತಾಲ್ಲೂಕಿನ ಅನಗಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು.
ಮಚ್ಚಿನಿಂದ ಹಸುವಿನ ಹಿಂಬದಿಯ ಎರಡು ಸ್ಥಳಗಳಲ್ಲಿ ಗಾಯವಾಗಿತ್ತು. ಐದು ತಿಂಗಳಿಂದ ಗ್ರಾಮಸ್ಥರು ಚಿಕಿತ್ಸೆ ನೀಡುತ್ತಿದ್ದರು.
ರಕ್ತಸ್ರಾವದಿಂದ ಬಳಲಿ ಹಸು ಆಹಾರ ತ್ಯಜಿಸಿತ್ತು.
ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಹಸು ಸಾವನ್ನಪ್ಪಿದೆ. ಗ್ರಾಮಸ್ಥರು ಊರಬಸವ ಎಂದು ಪರಿಗಣಿಸಿದ್ದರು.
ಪ್ರಕರಣ ಜರುಗಿ ಐದು ತಿಂಗಳಾದರೂ ಆರೋಪಿಗಳು ಪತ್ತೆಯಾಗಿಲ್ಲ.
ಮೈಸೂರಿನ ಜಯಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಮುಂಜಾನೆಯಿಂದಲೇ ಸ್ಥಳೀಯರು ಹಾಗೂ ಅಕ್ಕ-ಪಕ್ಕದ ಊರಿನ ಜನರು ದರ್ಶನ ಪಡೆದರು…