ಅವಧೂತ ದತ್ತಪೀಠದಲ್ಲಿ ಸಹಸ್ರ ಚಂಡಿಯಾಗ…ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭಾಗಿ…

ಅವಧೂತ ದತ್ತಪೀಠದಲ್ಲಿ ಸಹಸ್ರ ಚಂಡಿಯಾಗ…ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭಾಗಿ…

  • Temples
  • June 6, 2025
  • No Comment
  • 128

ಮೈಸೂರು,ಜೂ6,Tv10 ಕನ್ನಡ

ಗಣಪತಿ ಆಶ್ರಮದಲ್ಲಿ ಸಹಸ್ರ ಚಂಡಿಯಾಗ ಮತ್ತು ನವದುರ್ಗ ವೃಕ್ಷ ಶಾಂತಿ ಮಾಹಾಯಜ್ಞ ಕಾರ್ಯಕ್ರಮ ಇಂದಿನಿಂದ ಆರಂಭವಾಗಿದೆ.ಪ್ರಪಂಚದಲ್ಲೇ ಮೊಟ್ಟಮೊದಲ ಬಾರಿಗೆ ಸಹಸ್ರ ಚಂಡಿಯಾಗ ಅವಧೂರ ದತ್ತಪೀಠದಲ್ಲಿ ಹಮ್ಮಿಕೊಳ್ಳಲಾಗಿದೆ.ಹಿಂದೆ ಮಹಾಭಾರತ ನಡೆದ ವೇಳೆಯಲ್ಲಿ ಮಹಾಚಂಡಿ ಯಾಗ ನಡೆದಿತ್ತು.ನಂತರ ಇದೀಗ ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಮಹಾಚಂಡಿ ಯಾಗ ಗಣಪತಿ ಆಶ್ರಮದಲ್ಲಿ ನಡೆಯುತ್ತಿದೆ.ಇದರ ಜೊತೆಗೆ ನವದುರ್ಗ ವೃಕ್ಷ ಶಾಂತಿ ಮಹಾಯಜ್ಞವನ್ನೂ ಹಮ್ಮಿಕೊಳ್ಳಲಾಗಿದೆ.ಲೋಕ ಕಲ್ಯಾಣಾರ್ಥವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.14 ದಿನಗಳ ಕಾಲ 11 ಹೋಮಕುಂಡಗಳಲ್ಲಿ ಯಾಗ ನಡೆಯಲಿದೆ.ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಇದೇ ವೇಳೆ ಮಾತನಾಡಿ
ಅನೇಕ ವಿಷಯದಲ್ಲಿ ಭಾರತ ಜಗತ್ತಿನಲ್ಲಿ ಈಗ ನಾಲ್ಕನೇ ಸ್ಥಾನದಲ್ಲಿದೆ,ಆರ್ಥಿಕ ವಿಷಯದಲ್ಲೂ 4ನೆ ಸ್ಥಾನಕ್ಕೆ ಬಂದಿದ್ದೇವೆ,ನಮ್ಮ ದೇಶ ನಂಬರ್ ಒನ್ ಸ್ಥಾನಕ್ಕೆ ಬರಬೇಕು,ಅದಕ್ಕಾಗಿ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಗತ್ತಿನಲ್ಲಿ ಶಾಂತಿ ನೆಮ್ಮದಿ ಮತ್ತು ಸೃಷ್ಟಿಯ ಜೊತೆಗೆ ಸಮತೋಲನ ಇರಬೇಕು ಹಾಗಾಗಿ ದೇಶ ಬಲಾಡ್ಯ ಆಗಬೇಕು ಎಂದು ಜೋಶಿ ಅಭಿಪ್ರಾಯ ಪಟ್ಟರು.
ಗಣಪತಿ ಶ್ರೀಗಳು 14 ದಿನಗಳ ಕಾಲ ಸಹಸ್ರ ಚಂಡಿ ಆಗ ಮತ್ತು ವನದುರ್ಗ ವೃಕ್ಷ ಶಾಂತಿ ಮಹಾ ಯಜ್ಞವನ್ನು ನಮ್ಮೆಲ್ಲರ ಮನಸ್ಸಿಗೆ ನಾಟುವಂತೆ, ಭಕ್ತಿಯ ಭಾವ ವೃದ್ದಿಯಾಗುವಂತೆ ಆಧ್ಯಾತ್ಮಿಕ ಮನಸ್ಸು ಉದ್ದೀಪನ ಆಗುವಂತೆ ಈ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ ಒಂಬತ್ತು ಸಾವಿರ ಪೂಜನೀಯ ವೃಕ್ಷಗಳಿಂದ ಪೂಜೆ ಮಾಡಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇಡೀ ಜಗತ್ತಿನಲ್ಲಿ ಕಾಡು ಮತ್ತು ಗಿಡಗಳು ಕಡಿಮೆಯಾಗುತ್ತಿದೆ ಆದರೆ ನಮ್ಮ ಭಾರತ ದೇಶದಲ್ಲಿ ಕಳೆದ 11 ವರ್ಷಗಳಲ್ಲಿ ಶೇ 17ರಷ್ಟು ಕಾಡು ವೃದ್ಧಿಯಾಗಿದೆ, ಇದಕ್ಕೆ ನಿಜವಾದ ಮೂಲಭೂತ ಕಾರಣ ಎಂದರೆ ಆಧ್ಯಾತ್ಮ ಭಕ್ತಿ, ದೇವರ ಮೇಲೆ ನಮ್ಮ ನಂಬಿಕೆ, ಸ್ವಾಮೀಜಿಯವರು ಮಾಡುತ್ತಿರುವ ಇಂತಹ ಚಂಡಿಯಾಗ.ಈ ಮೂಲಕ ಸೃಷ್ಟಿಯನ್ನು ಸಂರಕ್ಷಿಸಬೇಕು ಎಂದು ಗಣಪತಿ ಸ್ವಾಮೀಜಿಯವರು ಸಂದೇಶ ಕೊಟ್ಟಿದ್ದಾರೆ, ಇಂತಹ ಪುಣ್ಯ ಮತ್ತು ಪವಿತ್ರ ಕಾರ್ಯದಲ್ಲಿ ನನಗೆ ಅನಿರೀಕ್ಷಿತವಾಗಿ ಭಾಗವಹಿಸುವ ಲಾಭ ಸಿಕ್ಕಿದೆ ಅದಕ್ಕಾಗಿ ಗಣಪತಿ ಸ್ವಾಮೀಜಿಯವರು ಮತ್ತು ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ಶ್ರೀಗಳಿಗೆ ನಾನು ಭಕ್ತಿ ಪೂರ್ವಕವಾಗಿ ನಮಿಸುತ್ತೇನೆ ಎಂದು ತಿಳಿಸಿದರು.

ಶ್ರೀ ಗಣಪತಿ ಸ್ವಾಮೀಜಿಯವರು ಪ್ರಹ್ಲಾದ ಜೋಶಿ ಮತ್ತು ಶಾಸಕ ಟಿ.ಎಸ್.ಶ್ರೀವತ್ಸ ಅವರ ಕೈನಿಂದಲೇ ಹೋಮ ಕಾರ್ಯ ಮಾಡಿಸಿದ್ದು ವಿಶೇಷವಾಗಿತ್ತು.
ಬೆಳಗ್ಗೆ ಏಳು ಗಂಟೆಗೆ ಅವಧೂತ ದತ್ತಪೀಠದ ಆವರಣದಲ್ಲಿ 11 ಹೋಮ ಕುಂಡಗಳಲ್ಲಿ ಸಹಸ್ರ ಚಂಡಿ ಯಾಗ ಪ್ರಾರಂಭವಾಯಿತು.
ಇದರ ಜತೆಗೆ ರುದ್ರ ಹೋಮ ಕೂಡಾ ನೆರವೇರಿತು.ನಂತರ ಭಕ್ತಾದಿಗಳಿಂದ ಸೌಂದರ್ಯ ಲಹರಿ ಮತ್ತು ಲಲಿತಾ ಸಹಸ್ರನಾಮ ಕೂಡ ನಡೆಯಿತು.

ಇಂದಿನ ಚಡಿಯಾಗ ಪೂಜಾ ಕಾರ್ಯದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಸಿಇಒ ವಿಶ್ವಭೂಷಣ್ ಮಿಶ್ರ ಕೂಡ ಪಾಲ್ಗೊಂಡಿದ್ದರು.

ಪ್ರಹ್ಲಾದ ಜೋಶಿಯವರೊಂದಿಗೆ ಶಾಸಕ ಟಿ ಎಸ್ ಶ್ರೀವತ್ಸ, ಬಿಜೆಪಿ ನಗರ ಅಧ್ಯಕ್ಷ ಎಲ್. ನಾಗೇಂದ್ರ ಮತ್ತು ಜೋಗಿ ಮಂಜು ಮತ್ತಿತರರು ಹಾಜರಿದ್ದರು…

Spread the love

Related post

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…
ಮೈಸೂರು ಪೊಲೀಸ್ ಅಲರ್ಟ್…ರೌಡಿ ಪ್ರತಿಬಂಧಕ ದಳದಿಂದ ವಿಶೇಷ ಕಾರ್ಯಾಚರಣೆ…ಕಾನೂನು ಬಾಹಿರ ಚಟುವಟಿಕೆಗೆ ಬ್ರೇಕ್…400 ಕ್ಕೂ ಹೆಚ್ಚು ಪ್ರಕರಣ ದಾಖಲು…

ಮೈಸೂರು ಪೊಲೀಸ್ ಅಲರ್ಟ್…ರೌಡಿ ಪ್ರತಿಬಂಧಕ ದಳದಿಂದ ವಿಶೇಷ ಕಾರ್ಯಾಚರಣೆ…ಕಾನೂನು ಬಾಹಿರ ಚಟುವಟಿಕೆಗೆ…

ಮೈಸೂರು,ಅ12,Tv10 ಕನ್ನಡ ಇತ್ತೀಚೆಗೆ ನಡೆದ ಭೀಕರ ಕೊಲೆ ರೇಪ್ ಅಂಡ್ ಮರ್ಡರ್ ಮೈಸೂರು ಪೊಲೀಸರ ಕಾರ್ಯಚಟುವಟಿಕೆಯನ್ನ ಪ್ರಶ್ನಿಸುವಂತೆ ಮಾಡಿದೆ.ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸ್ ಪಡೆ ಸನ್ನದ್ದಾಗಿ…

Leave a Reply

Your email address will not be published. Required fields are marked *