
ಮಾನವೀಯತೆ ಮರೆತ ಸಚಿವ ಚೆಲುವರಾಯ ಸ್ವಾಮಿ…ಅಪಘಾತದಲ್ಲಿ ನರಳಾಡುತ್ತಿದ್ದ ವ್ಯಕ್ತಿಯನ್ನ ನೋಡುತ್ತಾ ನಿಂತ ಸಚಿವ…
- TV10 Kannada Exclusive
- June 9, 2025
- No Comment
- 63
ಮಂಡ್ಯ,ಜೂ9,Tv10 ಕನ್ನಡ
ಅಪಘಾತದಲ್ಲಿ ಸಿಲುಕಿದ ವ್ಯಕ್ತಿ ರಸ್ತೆಯಲ್ಲಿ ನರಳಾಡುತ್ತಿದ್ದರೆ ನೆರವಿಗೆ ಬಾರದೆ ಅಸಹಾಯಕನಾಗಿ ನೋಡುತ್ತಾ ನಿಂತ ಸಚಿವ ಚೆಲುವರಾಯಸ್ವಾಮಿ ವಿರುದ್ದ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.ದೃಶ್ಯಗಳನ್ನ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ಟೀಕೆಗೆ ಗುರಿಯಾಗಿದ್ದಲ್ಲದೆ ಪೇಚಿಗೆ ಸಿಲುಕಿದ್ದಾರೆ.ಮೈಸೂರು ಬೆಂಗಳೂರು ಹೆದ್ದಾರಿ ಶ್ರೀರಂಗಪಟ್ಟಣ ಬಳಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಸುಲಿಲುಕಿದ ವ್ಯಕ್ತಿ ನರಳಾಡುತ್ತಿದ್ದರು.ಅದೇ ವೇಳೆ ಅದೇ ದಾರಿಯಲ್ಲಿ ಬಂದ ಸಚಿವರು ನೆರವಿಗೆ ಧಾವಿಸದೆ ನೋಡುತ್ತಾ ನಿಂತರು.ರಸ್ತೆ ಬದಿ ವ್ಯಕ್ತಿ ನರಳಾಡುತ್ತಿದ್ದರೂ ಕಾರಿನ ಬಳಿಯೇ ನಿಂತು ವೀಕ್ಷಿಸುತ್ತಿದ್ದರು.
ಕನಿಷ್ಟ ಗಾಯಾಳು ಆರೋಗ್ಯ ವಿಚಾರಿಸದೆ ನಿರ್ಲಕ್ಷ್ಯ ವಹಿಸಿದ್ದರು.
ಘಟನೆಯಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಜೀವನ್ಮರಣದ ನಡುವೆ ನರಳಾಡುತ್ತಿದ್ದರು.
ಸಚಿವರ ಸರ್ಕಾರಿ ಕಾರು, ಅಂಗರಕ್ಷಕರ ವಾಹನ ಇದ್ದರೂ ಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸುವ ಚಿಂತೆ ಮಾಡದೆ
ಸ್ಥಳಕ್ಕೆ ಪೊಲೀಸರನ್ನ ಕರೆಸಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚನೆ ನೀಡಿದರು.ಈ ದೃಶ್ಯಗಳನ್ನ
ಸ್ವತಃ ತನ್ನ ಫೇಸ್ ಬುಕ್, ವಾಟ್ಸಾಪ್ ಗ್ರೂಪ್ ಗಳಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ
ಸಚಿವರ ವರ್ತನೆಯನ್ನ ಸಾರ್ವಜನಿಕರು ಟೀಕಿಸಿದ್ದಾರೆ.
ಸಚಿವರು, ಆಪ್ತರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ…