
ಮಹಾಲಿಂಗೇಶ್ವರ ದೇವಸ್ಥಾನದ ಬಸವನಿಗೆ ಕಡಿದ ಹುಚ್ಚುನಾಯಿ…ಶ್ವಾನದಂತೆ ವರ್ತಿಸಿ ಭೀತಿ ಸೃಷ್ಟಿಸುತ್ತಿರುವ ಬಸವ…ಸ್ಥಳೀಯರಿಗೆ ಆತಂಕ…
- TV10 Kannada Exclusive
- June 23, 2025
- No Comment
- 111
ಮಹಾಲಿಂಗೇಶ್ವರ ದೇವಸ್ಥಾನದ ಬಸವನಿಗೆ ಕಡಿದ ಹುಚ್ಚುನಾಯಿ…ಶ್ವಾನದಂತೆ ವರ್ತಿಸಿ ಭೀತಿ ಸೃಷ್ಟಿಸುತ್ತಿರುವ ಬಸವ…ಸ್ಥಳೀಯರಿಗೆ ಆತಂಕ…
ಮೈಸೂರು,ಜೂ22,Tv10 ಕನ್ನಡ
ಮೈಸೂರಿನ ಮೇಟಗಳ್ಳಿಯ ಜನಕ್ಕೆ ವಿನೂತನ ಸಮಸ್ಯೆಯೊಂದು ಎದುರಾಗಿದೆ.ಮಹಾಲಿಂಗೇಶ್ವರ ದೇವಾಲಯಕ್ಕೆ ಸೇರಿದ ಬಸವನಿಂದ ಇದೀಗ ರಕ್ಷಣೆ ಬೇಕಿದೆ.ಅಲ್ಲದೆ ಬಸವನಿಗೆ ಸೂಕ್ತ ವೈದ್ಯೋಪಚಾರವೂ ಬೇಕಿದೆ.
ಹೌದು…ಗ್ರಾಮದ ಬಸವನಿಗೆ ಕೆಲವು ದಿನಗಳ ಹಿಂದೆ ಹುಚ್ಚುನಾಯಿ ಕಡಿದಿದೆ.ಹೀಗಾಗಿ ಬಸವ ಸಹ ಹುಚ್ಚುನಾಯಿಯಂತೆ ವರ್ತಿಸುತ್ತಾ ಬೊಗಳುತ್ತಾ ಸಾರ್ವಜನಿಕರಿಗೆ ಭೀತಿ ಸೃಷ್ಟಿಸಿದೆ.ಬಸವನ ಹುಚ್ಚು ವರ್ತನೆ ಹೆಚ್ಚಾದ ಹಿನ್ನಲೆ ಸ್ಥಳೀಯರು ಅಪಾಯವನ್ನ ಲೆಕ್ಕಿಸದೆ ಹಿಡಿದು ಕಟ್ಟಿಹಾಕಿದ್ದಾರೆ.ಹುಚ್ಚಾಗಿ ವರ್ತಿಸುತ್ತಿರುವ ಬಸವನ ಆರೈಕೆಗಾಗಿ ಪಶು ವೈದ್ಯರ ನೆರವಿಗಾಗಿ ಹುಡುಕುತ್ತಿದ್ದಾರೆ.ಹುಚ್ಚುನಾಯಿಯಿಂದ ಕಡಿಸಿಕೊಂಡು ನಾಯಿಯಂತೆ ವರ್ತಿಸುತ್ತಿರುವ ಬಸವನಿಗೆ ಸೂಕ್ತ ಚಿಕಿತ್ಸೆ ಬೇಕಿದೆ.ಕೂಡಲೇ ಸಂಭಂಧಪಟ್ಟ ಇಲಾಖೆ ಇತ್ತ ಗಮನ ಹರಿಸಬೇಕಿದೆ.ಬಸವನಿಗೆ ಚಿಕಿತ್ಸೆ ನೀಡಿ ಸಹಜ ಸ್ಥಿತಿಗೆ ತರಲು ನೆರವಾಗಬೇಕಿದೆ…
ಸಂಪರ್ಕಿಸಬೇಕಾದ ವ್ಯಕ್ತಿಗಳು
ಕಾಂತ
9741137777
ಸಂತೋಷ್ 990022259