
ಹುಲಿ ದಾಳಿ…ಹಸು ಸಾವು…
- TV10 Kannada Exclusive
- July 14, 2025
- No Comment
- 43
ಹುಣಸೂರು,ಜು14,Tv10 ಕನ್ನಡ

ಹುಲಿದಾಳಿಗೆ ಹಸು ಬಲಿಯಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ
ಕೆ.ಜೆ.ಹಬ್ಬನಕುಪ್ಪೆಯಲ್ಲಿ ನಡೆದಿದೆ.ಅಲ್ಲದೆ
ಗೌರಿಪುರದಲ್ಲಿ ಹುಲಿ ದಾಳಿಯಿಂದ ಹಸುವೊಂದು ಗಾಯಗೊಂಡಿದೆ.
ನಾಗರಹೊಳೆ ಉದ್ಯಾನದ ಬಳಿಯ ಕಚುವಿನ ಹಳ್ಳಿಯ ರುಕ್ಮಿಣಿ ಶ್ರೀನಿವಾಸರಿಗೆ ಸೇರಿದ ಹಸು ಸಾವನ್ನಪ್ಪಿದರ.
ನಂಜಾಪುರ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಪಕ್ಕದ ಕುರುಚಲು ಅರಣ್ಯ ಪ್ರದೇಶದಲ್ಲಿ ಹಾಗೂ
ನಂಜಾಪುರದ ರೈತ ನಟರಾಜ್‌ರಿ ಎಂಬುವವರಿಗೆ ಸೇರಿದ ಹಸುವಿಗೆ ಗಾಯವಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…